ಬರೋಡ ರಣಜಿ ತಂಡಕ್ಕೆ ಕನ್ನಡಿಗ ಸನತ್ ಕುಮಾರ್ ಕೋಚ್

0

ಬೆಂಗಳೂರು, ಜೂನ್ 27: ಕರ್ನಾಟಕದ ಮಾಜಿ ಕ್ರಿಕೆಟಿಗ ಹಾಗೂ ಮಾಜಿ ಕೋಚ್ ಸನತ್ ಕುಮಾರ್ ಮುಂದಿನ ಎರಡು ವರ್ಷಗಳ ಅವಧಿಗೆ ಬರೋಡ ತಂಡದ ಕೋಚ್ ಆಗಿ ನೇಮಕಗೊಂಡಿದ್ದಾರೆ.

2ನೇ ಬಾರಿ ಬರೋಡ ತಂಡದ ಕೋಚ್ ಆಗಿ ಸನತ್ ಕುಮಾರ್ ಅವರನ್ನು ಬರೋಡ ಕ್ರಿಕೆಟ್ ಸಂಸ್ಥೆ ನೇಮಕ ಮಾಡಿದೆ. ಈ ಹಿಂದೆ 2011-12 ಹಾಗೂ 2013-14ನೇ ಸಾಲಿನಲ್ಲಿ ಸನತ್ ಕುಮಾರ್ ಬರೋಡ ತಂಡದ ಕೋಚ್ ಆಗಿದ್ದಾರೆ. ಕಳೆದ ಸಾಲಿನಲ್ಲಿ ಸನತ್ ಮೇಘಾಲಯ ತಂಡದ ಕೋಚ್ ಆಗಿದ್ದರು. 2019-20 ಹಾಗೂ 2020-21ನೇ ಸಾಲಿಗೆ ಬರೋಡ ತಂಡದ ಕೋಚ್ ಆಗಿ ನೇಮಕವಾಗಿರುವ ಸನತ್ ಕುಮಾರ್ ಅವರಿಗೆ ಬರೋಡ ಕ್ರಿಕೆಟ್ ಸಂಸ್ಥೆ ಒಟ್ಟು 85 ಲಕ್ಷ ರೂ.ಗಳ ಸಂಭಾವನೆ ನೀಡಲಿದೆ.  

56 ವರ್ಷದ ಸನತ್ ಕುಮಾರ್ 1986 ರಿಂದ 1989ರ ಅವಧಿಯಲ್ಲಿ ಕರ್ನಾಟಕ ಪರ 11 ಪ್ರಥಮದರ್ಜೆ ಪಂದ್ಯಗಳನ್ನಾಡಿದ್ದರು. ಬಲಗೈ ಮಧ್ಯಮ ವೇಗಿಯಾಗಿದ್ದ ಸನತ್ ರಾಜ್ಯದ ಪರ 4 ಲಿಸ್ಟ್ ಪಂದ್ಯಗಳನ್ನೂ ಆಡಿದ್ದಾರೆ. 2009-10ನೇ ಸಾಲಿನಲ್ಲಿ ಸನತ್ ಕುಮಾರ್ ಕರ್ನಾಟಕ ತಂಡದ ಕೋಚ್ ಆಗಿದ್ದಾಗ, ರಾಜ್ಯ ತಂಡ ರಣಜಿ ಫೈನಲ್ ತಲುಪಿತ್ತು. ಆದರೆ ಮೈಸೂರಿನಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ಮುಂಬೈ ವಿರುದ್ಧ ಕೇವಲ 6 ರನ್ಗಳಿಂದ ಸೋತು ನಿರಾಸೆ ಅನುಭವಿಸಿತ್ತು.

ದೇಶೀಯ ಕ್ರಿಕೆಟ್ನ ಅತ್ಯುತ್ತಮ ಕೋಚ್ ಆಗಿರುವ ಸನತ್ ಕುಮಾರ್ ಈ ಹಿಂದೆ ಅಸ್ಸಾಂ, ಆಂಧ್ರ ತಂಡಗಳ ಕೋಚ್ ಕೂಡ ಆಗಿದ್ದರು. ಸನತ್ ಕುಮಾರ್ ಅವರ ಗರಡಿಯಲ್ಲಿ ಅಸ್ಸಾಂ ತಂಡ ಮೊದಲ ಬಾರಿ ರಣಜಿ ಸೆಮಿಫೈನಲ್ ಪ್ರವೇಶಿಸಿ ಇತಿಹಾಸ ನಿರ್ಮಿಸಿತ್ತು. 

LEAVE A REPLY

Please enter your comment!
Please enter your name here

fifteen − six =