ಬಿಜೆಪಿ ಸೇರಿದ ವಿಶ್ವಕಪ್ ಹೀರೋ ಗಂಭೀರ್.. ಲೋಕಸಭೆಗೆ ಸ್ಪರ್ಧೆ, ಅಖಾಡ ಯಾವ್ದು ಗೊತ್ತಾ..?

0

ದೆಹಲಿ, ಮಾರ್ಚ್ 22: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ, ವಿಶ್ವಕಪ್ ಹೀರೋ ಗೌತಮ್ ಗಂಭೀರ್ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.

ದೆಹಲಿಯ ಬಿಜೆಪಿ ಕಛೇರಿಯಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ಸಚಿವರಾದ ಅರುಣ್ ಜೈಟ್ಲಿ ಮತ್ತು ರವಿಶಂಕರ್ ಪ್ರಸಾದ್, ಗೌತಮ್ ಗಂಭೀರ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು. 37 ವರ್ಷದ ಗಂಭೀರ್ ದೆಹಲಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆಯಿದೆ.

ಎಡಗೈ ಆರಂಭಿಕ ಬ್ಯಾಟ್ಸ್ ಮನ್ ಆಗಿದ್ದ ಗೌತಮ್ ಗಂಭೀರ್ ಭಾರತ ತಂಡ 2007ರಲ್ಲಿ ಟಿ20 ವಿಶ್ವಕಪ್ ಮತ್ತು 2011ರಲ್ಲಿ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಪಾಕಿಸ್ತಾನ ವಿರುದ್ಧದ ಟಿ20 ವಿಶ್ವಕಪ್ ನಲ್ಲಿ 75 ರನ್ ಬಾರಿಸಿದ್ದ ಗಂಭೀರ್, 2011ರ ವಿಶ್ವಕಪ್ ಫೈನಲ್ ನಲ್ಲಿ ಶ್ರೀಲಂಕಾ ವಿರುದ್ಧ 97 ರನ್ ಸಿಡಿಸಿ ಭಾರತ ವಿಶ್ವಕಪ್ ಗೆಲ್ಲಲು ಕಾರಣರಾಗಿದ್ದರು. 

ಭಾರತ ಪರ 58 ಟೆಸ್ಟ್ ಪಂದ್ಯಗಳನ್ನಾಡಿರುವ ಗಂಭೀರ್ 9 ಶತಕಗಳ ಸಹಿತ 4154 ರನ್, 147 ಏಕದಿನ ಪಂದ್ಯಗಳಿಂದ 11 ಶತಕಗಳೊಂದಿಗೆ 5238 ರನ್ ಹಾಗೂ 37 ಟಿ20 ಪಂದ್ಯಗಳಿಂದ 7 ಅರ್ಧಶತಕಗಳ ಸಹಿತ 932 ರನ್ ಗಳಿಸಿದ್ದಾರೆ.https://twitter.com/GautamGambhir/status/1109080949222969344

LEAVE A REPLY

Please enter your comment!
Please enter your name here

15 − 11 =