ವಿಶ್ವಕಪ್ ಗೆದ್ದು ಬನ್ನಿ ಬಾಯ್ಸ್: ಭಾರತಕ್ಕೆ ಶುಭ ಹಾರೈಸಿದ ಜರ್ಮನ್ ಫುಟ್ಬಾಲರ್!

0

ಬೆಂಗಳೂರು, ಜೂನ್ 3: ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆ.

ಭಾರತ ತಂಡ ಪ್ರಶಸ್ತಿ ಗೆಲ್ಲಲಿ ಎಂದು ಜರ್ಮನಿಯ ವಿಶ್ವವಿಖ್ಯಾತ ಫುಟ್ಬಾಲ್ ತಾರೆ ಥಾಮಸ್ ಮುಲ್ಲರ್ ಶುಭ ಹಾರೈಸಿದ್ದಾರೆ. ಟೀಮ್ ಇಂಡಿಯಾ ಜರ್ಸಿ ಧರಿಸಿ ಕ್ರಿಕೆಟ್ ಬ್ಯಾಟ್ ಹಿಡಿದು ವಿರಾಟ್ ಕೊಹ್ಲಿ ಪಡೆಗೆ ಥಾಮಸ್ ಮುಲ್ಲರ್ ಟ್ವಿಟರ್ ಮೂಲಕ ಶುಭ ಹಾರೈಸಿದ್ದಾರೆ. ಎರಡು ಬಾರಿಯ ಚಾಂಪಿಯನ್ ಭಾರತ ತಂಡ ಜೂನ್ 5ರಂದು ಸೌಥಾಂಪ್ಟನ್ ನಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದೊಂದಿಗೆ ವಿಶ್ವಕಪ್ ನಲ್ಲಿ ತನ್ನ ಅಭಿಯಾನ ಆರಂಭಿಸಲಿದೆ.

LEAVE A REPLY

Please enter your comment!
Please enter your name here

fourteen − 1 =