ಕೆಪಿಎಲ್ ಫಿಕ್ಸಿಂಗ್ಗೆ ಹೊಸ ಟ್ವಿಸ್ಟ್: ಹನಿ ಟ್ರ್ಯಾಪ್ ಬಲೆಯಲ್ಲಿ ಆಟಗಾರರು..?

0

ಬೆಂಗಳೂರು, ನವೆಂಬರ್ 20: ಕರ್ನಾಟಕ ಪ್ರೀಮಿಯರ್ ಲೀಗ್(ಕೆಪಿಎಲ್) ಟೂರ್ನಿಯಲ್ಲಿ ನಡೆದಿದೆ ಎನ್ನಲಾಗಿರುವ ಮ್ಯಾಚ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಕೆಲ ಆಟಗಾರರು ಹನಿ ಟ್ರ್ಯಾಪ್ ಬಲೆಯಲ್ಲಿ ಬಿದ್ದು ಫಿಕ್ಸಿಂಗ್ ನಡೆಸಿರುವ ಬಗ್ಗೆ ಮಾಹಿತಿಗಳು ಲಭ್ಯವಾಗಿವೆ.

ಕೆಪಿಎಲ್ ಫಿಕ್ಸಿಂಗ್ ಬಗ್ಗೆ ಮಾತನಾಡಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ‘’ಫಿಕ್ಸಿಂಗ್, ಬೆಟ್ಟಿಂಗ್ ಪ್ರಕರಣದ ತನಿಖೆ ಚುರುಕುಗೊಂಡಿದ್ದು ಮಹತ್ವದ ಸಾಕ್ಷಿಗಳು ಲಭ್ಯವಾಗುತ್ತಿವೆ. ಫಿಕ್ಸಿಂಗ್, ಬೆಟ್ಟಿಂಗ್ ಬಗ್ಗೆ ಮಾಹಿತಿ ಇದ್ದರೂ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಆಟಗಾರರು ಮತ್ತು ಸಂಬಂಧ ಪಟ್ಟವರ ಬಗ್ಗೆ ಕ್ರಮ ಕೈಗೊಳ್ಳದೆ ಮೂಕಪ್ರೇಕ್ಷಕನಾಗಿ ಕುಳಿತಿತ್ತು. ಬುಕ್ಕಿಗಳು ಆಟಗಾರರನ್ನು ಹನಿ ಟ್ರ್ಯಾಪ್ ಬಲೆಯಲ್ಲಿ ಬೀಳಿಸಿ ಮ್ಯಾಚ್ ಫಿಕ್ಸಿಂಗ್ ನಡೆಸುವಂತೆ ಬ್ಲಾಕ್ ಮೇಲ್ ಮಾಡಿದ್ದಾರೆ. ಇದು ನಿಜಕ್ಕೂ ಆಘಾತಕಾರಿ ಸಂಗತಿ’’ ಎಂದು ತಿಳಿಸಿದ್ದಾರೆ.

‘’ತನಿಖೆಯನ್ನು ತೀವ್ರವಾಗಿ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಮಾಡುತ್ತೇವೆ. ಕರ್ನಾಟಕದ ಹಲವಾರು ಮಾಜಿ ಕ್ರಿಕೆಟಿಗರು ನನ್ನನ್ನು ಸಂಪರ್ಕಿಸಿ ಇದೇ ಮನವಿ ಮಾಡಿದ್ದಾರೆ. ತಪ್ಪು ಮಾಡಿದವರಿಗೆ ಶಿಕ್ಷೆ ಖಚಿತ’’ ಎಂದು ಭಾಸ್ಕರ್ ರಾವ್ ಹೇಳಿದ್ದಾರೆ.

ಮ್ಯಾಚ್ ಫಿಕ್ಸಿಂಗ್, ಬೆಟ್ಟಿಂಗ್ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಈಗಾಗಲೇ ಕರ್ನಾಟಕ ರಣಜಿ ತಂಡದ ಮಾಜಿ ನಾಯಕ ಸಿ.ಎಂ ಗೌತಮ್, ಅಬ್ರಾರ್ ಕಾಜಿ, ವಿನೂ ಪ್ರಸಾದ್, ವಿಶ್ವನಾಥನ್ ಅವರನ್ನು ಬಂಧಿಸಿದ್ದಾರೆ.

LEAVE A REPLY

Please enter your comment!
Please enter your name here

fifteen − 6 =