ಮಹಿಳಾ ಕ್ರಿಕೆಟ್: ಬ್ಯಾಟಿಂಗ್‌ನಲ್ಲೂ, ಬೌಲಿಂಗ್‌ನಲ್ಲೂ ಭಾರತೀಯರೇ ನಂ.1

0
PC: Jhulan Goswami/twitter


ದುಬೈ, ಮಾರ್ಚ್ 4: ಮಹಿಳಾ ಕ್ರಿಕೆಟ್ ನಲ್ಲಿ ಭಾರತದ ಸ್ಟಾರ್ ಬ್ಯಾಟರ್ ಸ್ಮೃತಿ ಮಂಧಾನ ಮತ್ತು ಅನುಭವಿ ಮಧ್ಯಮ ವೇಗಿ ಜೂಲನ್ ಗೋಸ್ವಾಮಿ ನಂ.1 ಸ್ಥಾನ ಅಲಂಕರಿಸಿದ್ದಾರೆ.

ಎಡಗೈ ಬ್ಯಾಟರ್ ಸ್ಮೃತಿ ಮಂಧಾನ ಈ ಹಿಂದೆಯೇ ಬ್ಯಾಟಿಂಗ್ rankingನಲ್ಲಿ ನಂ.1 ಸ್ಥಾನದಲ್ಲಿದ್ದರು. ಬೌಲಿಂಗ್ rankingನಲ್ಲಿ ಜೂಲನ್ ಗೋಸ್ವಾಮಿ ನಂ.1 ಸ್ಥಾನಕ್ಕೇರುವುದರೊಂದಿಗೆ ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಭಾರತೀಯರೇ ಅಗ್ರಸ್ಥಾನಕ್ಕೇರಿದಂತಾಗಿದೆ.

2012ರಲ್ಲಿ ಭಾರತದ ಮಿಥಾಲಿ ರಾಜ್ ಮತ್ತು ಜೂಲನ್ ಗೋಸ್ವಾಮಿ ಐಸಿಸಿ ಬ್ಯಾಟಿಂಗ್ ಮತ್ತು ಬೌಲಿಂಗ್ rankingನಲ್ಲಿ ನಂ.1 ಸ್ಥಾನ ಅಲಂಕರಿಸಿದ್ದರು.

ಇಂಗ್ಲೆಂಡ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ 8 ವಿಕೆಟ್ ಪಡೆದಿದ್ದ 36 ವರ್ಷದ ಜೂಲನ್ ಗೋಸ್ವಾಮಿ ಭಾರತ ತಂಡ 2-1ರಿಂದ ಸರಣಿ ಗೆಲ್ಲಲು ಕಾರಣರಾಗಿದ್ದರು. ಈ ಸಾಧನೆಯೊಂದಿಗೆ ಭಾರತ ತಂಡ ಐಸಿಸಿ rankingನಲ್ಲಿ 2ನೇ ಸ್ಥಾನಕ್ಕೇರಿದ್ದು, 2021ರಲ್ಲಿ ನ್ಯೂಜಿಲೆಂಡ್ ನಲ್ಲಿ ನಡೆಯಲಿರುವ ಐಸಿಸಿ ವಿಶ್ವಕಪ್ ಟೂರ್ನಿಗೆ ನೇರ ಅರ್ಹತೆ ಸಂಪಾದಿಸಿದೆ.

ಮಹಿಳಾ ಏಕದಿನ ಕ್ರಿಕೆಟ್ ನಲ್ಲಿ ಜೂಲನ್ ಗೋಸ್ವಾಮಿ ಅತಿ ಹೆಚ್ಚು 218 ವಿಕೆಟ್ ಪಡೆದಿದ್ದು, ಅವರ ಬೌಲಿಂಗ್ ಜೊತೆಗಾರ್ತಿ ಶಿಖಾ ಪಾಂಡೆ 12 ಸ್ಥಾನ ಮೇಲಕ್ಕೆ ಜಿಗಿದು 5ನೇ ಸ್ಥಾನಕ್ಕೇರಿದ್ದಾರೆ.

ಪ್ರಸಕ್ತ ಸಾಲಿನ ಐಸಿಸಿ ಮಹಿಳಾ ಚಾಂಪಿಯನ್ ಷಿಪ್ ನಲ್ಲಿ ಅತಿ ಹೆಚ್ಚು 837 ರನ್ ಗಳಿಸಿರುವ ಎಡಗೈ ಓಪನರ್ ಸ್ಮೃತಿ ಮಂಧಾನ ವೃತ್ತಿಜೀವನ ಶ್ರೇಷ್ಠ 797 ರೇಟಿಂಗ್ ಪಾಯಿಂಟ್ಸ್ ಕಲೆ ಹಾಕಿ ಬ್ಯಾಟಿಂಗ್ rankingನಲ್ಲಿ ಅಗ್ರಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here

seventeen − 6 =