ಐಸಿಸಿ ವಿಶ್ವಕಪ್ 2019: ಭಾರತ ತಂಡದ ಆಯ್ಕೆ ಯಾವಾಗ ಗೊತ್ತಾ..?

0
PC: Indian Cricket Team/Facebook

ಬೆಂಗಳೂರು, ಏಪ್ರಿಲ್ 8: ಮೇ 31ರಿಂದ ಜುಲೈ 14ರವರೆಗೆ ಇಂಗ್ಲೆಂಡ್ ನಲ್ಲಿ ನಡೆಯಲಿರುವ ಐಸಿಸಿ ವಿಶ್ವಕಪ್ ಟೂರ್ನಿಗೆ ದಿನಗಣನೆ ಆರಂಭವಾಗಿದೆ. ಐಪಿಎಲ್-12 ಟೂರ್ನಿ ಮುಗಿದ ಕೆಲವೇ ದಿನಗಳಲ್ಲಿ ಕ್ರಿಕೆಟ್ ಜನಕರ ನಾಡು ಇಂಗ್ಲೆಂಡ್ ನಲ್ಲಿ ವಿಶ್ವಕಪ್ ಹಬ್ಬ ಶುರುವಾಗಲಿದೆ.

ವಿಶ್ವಕಪ್ ಟೂರ್ನಿಗೆ ಭಾರತ ತಂಡದ ಆಯ್ಕೆ ಏಪ್ರಿಲ್ 15ರಂದು ಮುಂಬೈನಲ್ಲಿ ನಡೆಯಲಿದೆ. ಆ ದಿನ ನಡೆಯಲಿರುವ ಆಯ್ಕೆ ಸಮಿತಿಯ ಸಭೆಯಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, ಕೋಚ್ ರವಿ ಶಾಸ್ತ್ರಿ ಭಾಗವಹಿಸಲಿದ್ದಾರೆ. ವಿಶ್ವಕಪ್ ನಲ್ಲಿ ಆಡುತ್ತಿರುವ ಎಲ್ಲಾ ರಾಷ್ಟ್ರಗಳು ಏಪ್ರಿಲ್ 23ರ ಒಳಗೆ ತಮ್ಮ ಅಂತಿಮ 15ರ ತಂಡಗಳನ್ನು ಪ್ರಕಟಿಸಬೇಕಿದೆ.

2 ಬಾರಿಯ ಚಾಂಪಿಯನ್ ಭಾರತ ತಂಡ 1983ರಲ್ಲಿ ಕಪಿಲ್ ದೇವ್ ಅವರ ನಾಯಕತ್ವದಲ್ಲಿ ಮತ್ತು 2011ರಲ್ಲಿ ಮಹೇಂದ್ರ ಸಿಂಗ್ ಧೋನಿ ಅವರ ನಾಯಕತ್ವದಲ್ಲಿ ವಿಶ್ವಕಪ್ ಗೆದ್ದಿತ್ತು.

ಇದನ್ನೂ ಓದಿ: ಐಸಿಸಿ ವಿಶ್ವಕಪ್ 2019: ಇಲ್ಲಿದೆ ಟೀಮ್ ಇಂಡಿಯಾದ ಸಂಭಾವ್ಯ ತಂಡ

LEAVE A REPLY

Please enter your comment!
Please enter your name here

seventeen − 9 =