ಭಾರತಕ್ಕೆ 500ನೇ ಏಕದಿನ ವಿಜಯ ತಂದ ವಿಜಯ್ ಶಂಕರ್..!

0
PC: Twitter

ನಾಗ್ಪುರ, ಮಾರ್ಚ್ 5: ತಮಿಳುನಾಡಿನ ಯುವ ಆಲ್ರೌಂಡರ್ ವಿಜಯ್ ಶಂಕರ್ ಭಾರತಕ್ಕೆ 500ನೇ ಏಕದಿನ ಗೆಲುವು ತಂದು ಕೊಟ್ಟಿದ್ದಾರೆ.

ನಾಗ್ಪುರದ ವಿದರ್ಭ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಭಾರತ ತಂಡ 8 ರನ್ ಗಳ ರೋಚಕ ಗೆಲುವು ಸಾಧಿಸಿತು. ಆ ಮೂಲಕ 5  ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿತು.

ಗೆಲ್ಲಲು 251 ರನ್ ಗಳಿಸಬೇಕಿದ್ದ ಆಸ್ಟ್ರೇಲಿಯಾ ಕೈಯಲ್ಲಿದ್ದ 2 ವಿಕೆಟ್ ಗಳ ನೆರವಿನಿಂದ ಕೊನೆಯ ಓವರ್ ನಲ್ಲಿ 11 ರನ್ ಗಳಿಸಬೇಕಾದ ಅವಶ್ಯಕತೆಯಿತ್ತು. ತಮ್ಮ ಮೊದಲ ಓವರ್ ನಲ್ಲಿ 13 ರನ್ ನೀಡಿ ದುಬಾರಿಯಾಗಿದ್ದ ಆಲ್ರೌಂಡರ್ ವಿಜಯ್ ಶಂಕರ್ ಕೈಗೆ ನಾಯಕ ಕೊಹ್ಲಿ ಚೆಂಡಿತ್ತರು. ಮೊದಲ ಎಸೆತದಲ್ಲೇ ಮಾರ್ಕಸ್ ಸ್ಟೋಯ್ನಿಸ್(52) ವಿಕೆಟ್ ಪಡೆದ ವಿಜಯ್ ಶಂಕರ್ 3ನೇ ಎಸೆತದಲ್ಲಿ ಆಡಂ ಜಾಂಪ ಅವರನ್ನು ಕ್ಲೀನ್ ಬೌಲ್ಡ್ ಮಾಡಿ ಭಾರತಕ್ಕೆ ರೋಚಕ ಗೆಲುವು ತಂದುಕೊಟ್ಟರು.

ಇದು ಏಕದಿನ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಭಾರತ ಗಳಿಸಿದ 500ನೇ ಗೆಲುವಾಗಿದೆ. ಈ ಪಂದ್ಯದಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಶತಕ ಗಳಿಸಿ ವಿಜಯ್ ಶಂಕರ್ ಅವರೊಂದಿಗೆ ಗೆಲುವಿನ ರೂವಾರಿಯಾದರು.

ಭಾರತದ ಏಕದಿನ ಕ್ರಿಕೆಟ್ ಸಾಧನೆ

ಪಂದ್ಯ: 963, ಗೆಲುವು: 500, ಸೋಲು: 414, ಟೈ: 09, ನೋ ರಿಸಲ್ಟ್: 40

Brief scores

India: 250 all out in 48.2 overs (Virat Kohli 116, Vijay Shankar 46, Ravindra Jadeja 21; Patt Cummins 4/29, Adam Zampa 2/62) beat Australia: 242 all out in 49.3 overs (Marcus Stoinis 52, Peter Handscomb 48; Jasprit Bumrah 2/29, Kuldeep Yadav 3/54, Vijay Shankar 2/15) by 8 runs.

LEAVE A REPLY

Please enter your comment!
Please enter your name here

5 × 5 =