ಭಾರತ U-23 ತಂಡದಲ್ಲಿ ಇಬ್ಬರು ಕನ್ನಡಿಗರಿಗೆ ಸ್ಥಾನ

0

ಬೆಂಗಳೂರು, ಆಗಸ್ಟ್ 20: ಕರ್ನಾಟಕದ ಉದಯೋನ್ಮುಖ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಬಿ.ಆರ್ ಶರತ್ ಮತ್ತು ಪ್ರತಿಭಾನ್ವಿತ ಆಲ್ರೌಂಡರ್ ಶುಭಾಂಗ್ ಹೆಗ್ಡೆ ಭಾರತ U-23 ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಭಾರತ U-23 ತಂಡ ಬಾಂಗ್ಲಾದೇಶ U-23 ತಂಡದ ವಿರುದ್ಧ ಸೆಪ್ಟೆಂಬರ್ 19ರಿಂದ 27ರವರೆಗೆ ಛತ್ತೀಸ್’ಗಢದ ರಾಯ್ಪುರದಲ್ಲಿ 5 ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ.
22 ವರ್ಷದ ಬಲಗೈ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಬಿ.ಆರ್ ಶರತ್ ರಣಜಿ ಟ್ರೋಫಿಯ ಪದಾರ್ಪಣೆ ಪಂದ್ಯದಲ್ಲೇ ಶತಕ ಬಾರಿಸಿದ ಹಿರಿಮೆ ಹೊಂದಿದ್ದಾರೆ. ಕಳೆದ ವರ್ಷ ನಾಗ್ಪುರದಲ್ಲಿ ನಡೆದ ವಿದರ್ಭ ವಿರುದ್ಧದ ಪಂದ್ಯದ ಮೂಲಕ ಪ್ರಥಮದರ್ಜೆ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದ ಶರತ್, ಆ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿದ್ದರು. ಕರ್ನಾಟಕ ಪರ 6 ಪ್ರಥಮದರ್ಜೆ ಪಂದ್ಯಗಳನ್ನಾಡಿರುವ ಶರತ್ 18.20 ಸರಾಸರಿಯಲ್ಲಿ ಒಂದು ಶತಕ ಸಹಿತ 182 ರನ್ ಗಳಿಸಿದ್ದಾರೆ. ಅಲ್ಲದೆ 6 ಲಿಸ್ಟ್ ‘ಎ’ ಪಂದ್ಯಗಳನ್ನೂ ಆಡಿರುವ ಬಿ.ಆರ್ ಶರತ್ 110 ರನ್ ಕಲೆ ಹಾಕಿದ್ದಾರೆ. 13 ಟಿ20 ಪಂದ್ಯಗಳನ್ನಾಡಿ 195 ರನ್ ಗಳಿಸಿದ್ದಾರೆ. ಬಿ.ಆರ್ ಶರತ್ ಬಿಸಿಸಿಐ ಪ್ಯಾನೆಲ್’ನಲ್ಲಿರುವ ಅಂಪೈರ್ ಬಿ.ಕೆ ರವಿ ಅವರ ಪುತ್ರ.

BR Sharath

ಇನ್ನು 18 ವರ್ಷದ ಉದಯೋನ್ಮುಖ ಆಲ್ರೌಂಡರ್ ಶುಭಾಂಗ್ ಹೆಗ್ಡೆ ಈಗಾಗಲೇ ಭಾರತ U-19 ತಂಡದಲ್ಲಿ ಕಾಣಿಸಿಕೊಂಡಿದ್ದು, ಇದೀಗ U-23 ತಂಡದಲ್ಲೂ ಸ್ಥಾನ ಪಡೆದಿದ್ದಾರೆ.

ಬಾಂಗ್ಲಾದೇಶ U-23 ತಂಡದ ವಿರುದ್ಧದ ಏಕದಿನ ಸರಣಿಗೆ ಭಾರತ U-23 ತಂಡ: ಪ್ರಿಯಂ ಗಾರ್ಗ್(ನಾಯಕ), ಯಶಸ್ವಿ ಜೈಸ್ವಾಲ್, ಮಾಧವ್ ಕೌಶಿಕ್, ಬಿ.ಆರ್ ಶರತ್(ವಿಕೆಟ್ ಕೀಪರ್), ಸಮರ್ಥ್ ವ್ಯಾಸ್, ಆರ್ಯನ್ ಜುಯಾಲ್(ವಿಕೆಟ್ ಕೀಪರ್), ಋತ್ವಿಕ್ ರಾಯ್ ಚೌಧರಿ, ಕುಮಾರ್ ಸೂರಜ್, ಅತೀತ್ ಸೇಠ್, ಶುಭಾಂಗ್ ಹೆಗ್ಡೆ, ಹೃತಿಕ್ ಶೋಕೀನ್, ದೃಶಾಂತ್ ಸೋನಿ, ಅರ್ಷ್’ದೀಪ್ ಸಿಂಗ್, ಕಾರ್ತಿಕ್ ತ್ಯಾಗಿ, ಹರ್ಪ್ರೀತ್ ಬ್ರಾರ್.

LEAVE A REPLY

Please enter your comment!
Please enter your name here

18 + 1 =