ಮಹಿಳಾ ಕ್ರಿಕೆಟ್: ಸ್ಮೃತಿ ಮಂಧಾನ ನಾಯಕತ್ವಕ್ಕೆ ಸೋಲಿನ ಆರಂಭ

0
PC: ICC/Twitter

ಗುವಾಹಟಿ, ಮಾರ್ಚ್ 4: ವಿಶ್ವದ ನಂ.1 ಮಹಿಳಾ ಬ್ಯಾಟರ್ ಸ್ಮೃತಿ ಮಂಧಾನ ಅವರ ಟೀಮ್ ಇಂಡಿಯಾ ನಾಯಕತ್ವಕ್ಕೆ ಸೋಲಿನ ಆರಂಭ ಸಿಕ್ಕಿದೆ.

ಇಂಗ್ಲೆಂಡ್ ವಿರುದ್ಧ ಗುವಾಹಟಿಯ ಬರ್ಸಪರ ಕ್ರಿಕೆಟ್ ಮೈದಾನದಲ್ಲಿ ನಡೆದ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತದ ಮಹಿಳಾ ತಂಡ 41 ರನ್ ಗಳ ಸೋಲುಂಡಿತು. ಇದೇ ಮೊದಲ ಬಾರಿ ಭಾರತ ತಂಡವನ್ನು ಮುನ್ನಡೆಸಿದ ಸ್ಮೃತಿ ಮಂಧಾನ ಅವರಿಗೆ ಈ ಮೂಲಕ ಸೋಲಿನ ಆರಂಭ ಸಿಕ್ಕಿತು. ಹರ್ಮನ್ ಪ್ರೀತ್ ಕೌರ್ ಗಾಯದಿಂದ ಚೇತರಿಸಿಕೊಳ್ಳದ ಕಾರಣ 3 ಪಂದ್ಯಗಳ ಟಿ20 ಸರಣಿಯಲ್ಲಿ ಸ್ಮೃತಿ ಮಂಧಾನ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ನಡಸಿದ ಇಂಗ್ಲೆಂಡ್ ತಂಡ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 160 ರನ್ ಕಲೆ ಹಾಕಿತು.

ನಂತರ ಗುರಿ ಬೆನ್ನಟ್ಟಿದ ಭಾರತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 119 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು. ಟಿ20 ಅಂತರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ಹಿಮಾಚಲ ಪ್ರದೇಶದ ಹರ್ಲೀನ್ ಡಿಯೋಲ್ ಕೌರ್ ಕೇವಲ 8 ರನ್ನಿಗೆ ಔಟಾದರು. ಭರವಸೆಯ ಆಟಗಾರ್ತಿಯರಾದ ನಾಯಕಿ ಸ್ಮೃತಿ ಮಂಧಾನ(2), ಜೆಮೈಮಾ ರಾಡ್ರಿಗ್ಸ್(2), ಮಾಜಿ ನಾಯಕಿ ಮಿಥಾಲಿ ರಾಜ್(7) ವೈಫಲ್ಯ ಎದುರಿಸಿದ್ದು ಭಾರತದ ಸೋಲಿಗೆ ಕಾರಣವಾಯಿತು. ಭಾರತ ತಂಡಕ್ಕೆ ಕಂಬ್ಯಾಕ್ ಮಾಡಿದ ಕನ್ನಡತಿ ವೇದಾ ಕೃಷ್ಣಮೂರ್ತಿ 15 ರನ್ ಗಳಿಸಿ ಔಟಾದರು.

ಸರಣಿಯ 2ನೇ ಪಂದ್ಯ ಗುರುವಾರ ನಡೆಯಲಿದೆ.

Brief scores

England Women: 160/4 in 20 overs (DN Wyatt 35, TT Beaumont 62, Heather Knight 40; Radha Yadav 2/33, Shikha Pandey 1/18) beat India Women: 119/6 in 20 overs (Deepti Sharma 22 not out, Arundati Reddy 18, Veda Krishnamurthy 15, Shikha Pandey 23 not out; KH Brunt 2/21, LCN Smith 2/22) by 41 runs.

LEAVE A REPLY

Please enter your comment!
Please enter your name here

fifteen − 11 =