ಇಂಡಿಯನ್ ಆರ್ಮಿಗೆ 20 ಕೋಟಿ ನೀಡಿದ ಬಿಸಿಸಿಐ

0

ಚೆನ್ನೈ, ಮಾರ್ಚ್ 23: ಐಪಿಎಲ್-12 ಟೂರ್ನಿಯ ಉದ್ಘಾಟನಾ ಸಮಾರಂಭವನ್ನು ರದ್ದು ಪಡಿಸಲಾಗಿದ್ದು, ಇದಕ್ಕೆ ನಿಗದಿ ಪಡಿಸಲಾಗಿದ್ದ 20 ಕೋಟಿ ರೂ.ಗಳನ್ನು ಭಾರತೀಯ ಸೇನೆಗೆ ನೀಡಲಾಗಿದೆ.

ಈ ಬಗ್ಗೆ ಬಿಸಿಸಿಐ ಪ್ರಕಟಣೆ ಹೊರಡಿಸಿದ್ದು ಭಾರತೀಯ ಸೇನೆಗೆ 11 ಕೋಟಿ, CRPFಗೆ 7 ಕೋಟಿ, ಭಾರತೀಯ ವಾಯುಪಡೆ ಮತ್ತು ನೌಕಾದಳಕ್ಕೆ ತಲಾ 1 ಕೋಟಿ ರೂ.ಗಳನ್ನು ನೀಡಲಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ತಂಡಗಳ ನಡುವಿನ ಉದ್ಘಾಟನಾ ಪಂದ್ಯಕ್ಕೂ ಮೊದಲು ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಬಿಸಿಸಿಐ ಅಧಿಕಾರಿಗಳು ಇಂಡಿಯನ್ ಆರ್ಮಿ ಸಹಿತ ಸಂಬಂಧಪಟ್ಚ ಅಧಿಕಾರಿಗಳಿಗೆ ಚೆಕ್ ಹಸ್ತಾಂತರಿಸಿದರು.

LEAVE A REPLY

Please enter your comment!
Please enter your name here

one + eleven =