ಐಪಿಎಲ್: ಡೆಲ್ಲಿ ಕ್ಯಾಪಿಟಲ್ಸ್ ಪರ ಪಂಟರ್ ಜೊತೆ ಘರ್ಜಿಸಲಿದೆ ಬಂಗಾಳದ ಹುಲಿ..!

0
PC: Delhi Capitals/Twitter

ಬೆಂಗಳೂರು, ಮಾರ್ಚ್ 16: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ಬಂಗಾಳದ ಹುಲಿ ಖ್ಯಾತಿಯ ಸೌರವ್ ಗಂಗೂಲಿ ಐಪಿಎಲ್-12 ಟೂರ್ನಿಯಲ್ಲಿ ಘರ್ಜಿಸಲಿದ್ದಾರೆ. ಆದರೆ ಆಟಗಾರನಾಗಿ ಅಲ್ಲ, ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಲಹೆಗಾರನಾಗಿ.

ಹೌದು. ದಾದಾ ಖ್ಯಾತಿಯ ಗಂಗೂಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಲಹೆಗಾರರಾಗಿ ನೇಮಕಗೊಂಡಿದ್ದಾರೆ. ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಮಾಲೀಕತ್ವ ಬದಲಾಗಿರುವ ಹಿನ್ನೆಲೆಯಲ್ಲಿ ತಂಡದ ಹೆಸರೂ ಕೂಡ ಬದಲಾಗಿದೆ. ಅಲ್ಲದೆ ಕೋಚಿಂಗ್ ಸ್ಟಾಫ್ ಕೂಡ ಬದಲಾಗಿದ್ದು, ಆಸ್ಟ್ರೇಲಿಯಾ ತಂಡದ ದಿಗ್ಗಜ ನಾಯಕ ರಿಕಿ ಪಾಂಟಿಂಗ್ ತಂಡದ ಪ್ರಧಾನ ಕೋಚ್ ಆಗಿದ್ದಾರೆ.

PC: Delhi Capitals/twitter

ಕೋಲ್ಕತ್ತ ನೈಟ್ ರೈಡರ್ಸ್ ತಂಡದ ನಾಯಕರಾಗಿದ್ದ ಸೌರವ್ ಗಂಗೂಲಿ ನಂತರ ಪುಣೆ ವಾರಿಯರ್ಸ್ ಪರ 2012ರಲ್ಲಿ ಕೊನೆಯ ಬಾರಿ ಐಪಿಎಲ್ ಆಡಿದ್ದರು. ವಿಶೇಷ ಅಂದ್ರೆ ಗಂಗೂಲಿ ಮತ್ತು ರಿಕಿ ಪಾಂಟಿಂಗ್ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಜೊತೆಯಾಗಿ ಆಡಿದ್ದರು. ಆಗ ಗಂಗೂಲಿ ಕೆಕೆಆರ್ ತಂಡದ ನಾಯಕರಾಗಿದ್ದರು.

ಇದೀಗ ಭಾರತೀ ಕ್ರಿಕೆಟ್ ಕಂಡ ಸರ್ವಶ್ರೇಷ್ಠ ನಾಯಕರಲ್ಲೊಬ್ಬರಾದ ಸೌರವ್ ಗಂಗೂಲಿ ಮತ್ತು ಆಸೀಸ್ ಕ್ರಿಕೆಟ್ ಕಂಡ ಸಾರ್ವಕಾಲಿಕ ಶ್ರೇಷ್ಠ ನಾಯಕ ರಿಕಿ ಪಾಂಟಿಂಗ್ ಡೆಲ್ಲಿ ಕ್ಯಾಪಿಟಲ್ಸ್ ಪರ ಮತ್ತೊಮ್ಮೆ ಒಂದಾಗಿದ್ದಾರೆ.

LEAVE A REPLY

Please enter your comment!
Please enter your name here

3 × three =