ಆರ್‌ಸಿಬಿ ಆಟಗಾರರಿಗೆ ಕ್ರಿಕೆಟ್ ಪಾಠ ಹೇಳಿಕೊಟ್ಟ ‘ಥಲಾ’ ಧೋನಿ..!

0

ಚೆನ್ನೈ, ಮಾರ್ಚ್ 24: ಐಪಿಎಲ್-12 ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 7 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸುವ ಮೂಲಕ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಶುಭಾರಂಭ ಮಾಡಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಆರ್ ಸಿ ಬಿ ವಿರುದ್ಧ ಗೆದ್ದ ನಂತರ ಸಿ ಎಸ್ ಕೆ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ರಾಯಲ್ ಚಾಲೆಂಜರ್ಸ್ ತಂಡದ ಕೆಲ ಆಟಗಾರರಿಗೆ ಕ್ರಿಕೆಟ್ ಪಾಠ ಹೇಳಿಕೊಡುವ ಮೂಲಕ ಗಮನ ಸೆಳೆದಿದ್ದಾರೆ.

ಪಂದ್ಯ ಸೋತ ನಂತರ ರಾಯಲ್ ಚಾಲೆಂಜರ್ಸ್ ಆಟಗಾರರಾದ ಶಿವಂ ದುಬೆ, ವಾಷಿಂಗ್ಟನ್ ಸುಂದರ್ ಸಹಿತ ಮೂವರು ಆಟಗಾರರು ಧೋನಿ ಬಳಿ ತೆರಳಿ ಮಾರ್ಗದರ್ಶನ ನೀಡುವಂತೆ ಮನವಿ ಮಾಡಿದರು. ಆರ್ ಸಿ ಬಿ ತಂಡದ ಯುವ ಆಟಗಾರರ ಮನವಿಗೆ ಸ್ಪಂದಿಸಿದ ಧೋನಿ, ಅವರ ಜೊತೆ ಕೆಲ ಹೊತ್ತು ಸಮಯ ಕಳೆದು, ಅಮೂಲ್ಯ ಸಲಹೆಗಳನ್ನು ನೀಡಿದರು. ಈ ದೃಶ್ಯಗಳನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯ ಅಧಿಕೃತ ಟ್ವಿಟರ್ ನಲ್ಲಿ ಪ್ರಕಟಿಸಲಾಗಿದೆ.

LEAVE A REPLY

Please enter your comment!
Please enter your name here

9 − 6 =