ಐಪಿಎಲ್-12: ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಸ್ಥಾನ ಪಡೆದ ಮೈಸೂರು ಹುಡುಗ..!

0
Suchith J. PC: Facebook

ಬೆಂಗಳೂರು, ಏಪ್ರಿಲ್13: ಕರ್ನಾಟಕದ ಪ್ರತಿಭಾನ್ವಿತ ಆಲ್ರೌಂಡರ್ ಜೆ.ಸುಚಿತ್ ಐಪಿಎಲ್-12 ಟೂರ್ನಿಯಲ್ಲಿ ಆಡುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. 

ಈ ಹಿಂದೆ ಮುಂಬೈ ಇಂಡಿಯನ್ಸ್ ಪರ ಆಡಿದ್ದ ಮೈಸೂರು ಹುಡುಗ ಸುಚಿತ್ 2015ರಲ್ಲಿ ಚಾಂಪಿಯನ್ ಪಟ್ಟಕ್ಕೇರಿದ್ದ ಮುಂಬೈ ತಂಡದ ಸದಸ್ಯರಾಗಿದ್ದರು. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಧ್ಯಮ ವೇಗಿ ಹರ್ಷಲ್ ಪಟೇಲ್ ಗಾಯಗೊಂಡಿರುವ ಕಾರಣ ಬದಲಿ ಆಟಗಾರನನ್ನಾಗಿ ಸುಚಿತ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. 

ಎಡಗೈ ಸ್ಪಿನ್ನರ್ ಆಗಿರುವ ಸುಚಿತ್ ಕೆಳ ಕ್ರಮಾಂಕದಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಬಲ್ಲ ಉಪಯುಕ್ತ ಬ್ಯಾಟ್ಸ್ ಮನ್ ಕೂಡ ಹೌದು. 

LEAVE A REPLY

Please enter your comment!
Please enter your name here

fourteen − five =