ಕೊಡಗಿನ ಹುಡುಗ ಕಾರಿಯಪ್ಪಗೆ ಖುಲಾಯಿಸಿತು ಅದೃಷ್ಠ..!

0
PC: KKR/Twitter

ಬೆಂಗಳೂರು, ಮಾರ್ಚ್ 17: ಕರ್ನಾಟಕದ ಮಿಸ್ಟರಿ ಸ್ಪಿನ್ನರ್ ಕೆ.ಸಿ ಕಾರಿಯಪ್ಪ ಐಪಿಎಲ್-12ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಉತ್ತರ ಪ್ರದೇಶದ ವೇಗದ ಬೌಲರ್ ಶಿವಂ ಮಾವಿ ಗಾಯಗೊಂಡಿದ್ದು, ಅವರ ಬದಲು ಕೊಡಗಿನ ಕಲಿ ಕಾರಿಯಪ್ಪ ಅವರನ್ನು ಕೆಕೆಆರ್ ಫ್ರಾಂಚೈಸಿ ತನ್ನ ತಂಡಕ್ಕೆ ಸೇರಿಸಿಕೊಂಡಿದೆ. ಅಲ್ಲದೆ ಗಾಯಗೊಂಡಿರುವ ರಾಜಸ್ಥಾನದ ಯುವ ವೇಗಿ ಕಮಲೇಶ್ ನಾಗರಕೋಟಿ ಸ್ಥಾನದಲ್ಲಿ ಕೇರಳದ ವೇಗದ ಬೌಲರ್ ಸಂದೀಪ್ ವಾರಿಯರ್ ಸ್ಥಾನ ಪಡೆದಿದ್ದಾರೆ.

24 ವರ್ಷದ ಕಾರಿಯಪ್ಪ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿ ಕರ್ನಾಟಕ ತಂಡ ಚಾಂಪಿಯನ್ ಆಗುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ 11 ಪಂದ್ಯಗಳನ್ನಾಡಿದ್ದ ಕಾರಿಯಪ್ಪ 5.02ರ ಉತ್ತಮ ಸರಾಸರಿಯಲ್ಲಿ 10 ವಿಕೆಟ್ಸ್ ಪಡೆದು ಮಿಂಚಿದ್ದರು. 11 ಪಂದ್ಯಗಳಲ್ಲಿ ಒಟ್ಟು 41 ಓವರ್ಸ್ ಬೌಲಿಂಗ್ ಮಾಡಿದ್ದ ಕಾರಿಯಪ್ಪ 206 ರನ್ ನೀಡಿದ್ದರು. ಈ ಉತ್ತಮ ಪ್ರದರ್ಶನದ ಪರಿಣಾಮ, ಕಾರಿಯಪ್ಪ ಅವರಿಗೆ ಕೋಲ್ಕತ್ತ ನೈಟ್ ರೈಡರ್ಸ್ ತಂಡದಿಂದ ಬುಲಾವ್ ಬಂದಿತ್ತು. ಹೀಗಾಗಿ ಇಂದೋರ್ ನಲ್ಲಿ ನಡೆದ ಮಹಾರಾಷ್ಟ್ರ ವಿರುದ್ಧದ ಮುಷ್ತಾಕ್ ಅಲಿ ಫೈನಲ್ ಗೆದ್ದ ಮರುದಿನವೇ ಕಾರಿಯಪ್ಪ ಕೋಲ್ಕತ್ತಗೆ ತೆರಳಿದ್ದರು. ಇದೀಗ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಕೊಡಗಿನ ಕಲಿ ಕೆಸಿ ಕಾರಿಯಪ್ಪ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಪರ ಐಪಿಎಲ್ ಗೆ ಪದಾರ್ಪಣೆ ಮಾಡಿದ್ದರು. ನಂತರ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ಆಡಿದ್ದರು. ಆದರೆ ಈ ಬಾರಿಯ ಆಟಗಾರರ ಹರಾಜಿನಲ್ಲಿ ಕಾರಿಯಪ್ಪ ಅವರನ್ನು ಯಾವ ಫ್ರಾಂಚೈಸಿಯೂ ಖರೀದಿಸಿರಲಿಲ್ಲ. ಆದರೆ ಇದೀಗ ಕಾರಿಯಪ್ಪಗೆ ಅದೃಷ್ಠ ಖುಲಾಯಿಸಿದೆ.

LEAVE A REPLY

Please enter your comment!
Please enter your name here

4 × 2 =