ಐಪಿಎಲ್-12: ಮುಂಬೈ ಇಂಡಿಯನ್ಸ್ ತಂಡಕ್ಕೆ ಕನ್ನಡಿಗ ಟ್ರೈನರ್..!

0

ಬೆಂಗಳೂರು, ಮಾರ್ಚ್ 15: ಇಂಡಿಯನ್ ಪ್ರೀಮಿಯರ್ ಲೀಗ್-12 ಟೂರ್ನಿ ಆರಂಭವಾಗಲು ಇನ್ನು ಉಳಿದಿರುವುದು ಕೇವಲ ಒಂದು ವಾರ ಮಾತ್ರ. ಈ ಬಾರಿಯ ವಿಶೇಷ ಎಂದರೆ ಮೂರು ಬಾರಿಯ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ತಂಡಕ್ಕೆ ಕನ್ನಡಿಗ ನಾಗೇಂದ್ರ ಪ್ರಸಾದ್ ಟ್ರೈನರ್ ಆಗಿದ್ದಾರೆ.

ಬೆಂಗಳೂರಿನಲ್ಲಿರುವ ಬಿಸಿಸಿಐನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ದೀರ್ಘ ಕಾಲ ಟ್ರೈನರ್ ಆಗಿದ್ದ ನಾಗೇಂದ್ರ ಪ್ರಸಾದ್, ಕ್ರಿಕೆಟ್ ವಲಯದಲ್ಲಿ ‘ನಾಗಿ’ ಎಂದೇ ಪ್ರಸಿದ್ಧರು. ದೇಶದ ಅತ್ಯುತ್ತಮ ಟ್ರೈನರ್ ಗಳಲ್ಲಿ ಒಬ್ಬರಾಗಿರುವ ನಾಗೇಂದ್ರ ಪ್ರಸಾದ್, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಹುದ್ದೆ ತೊರೆದ ನಂತರ ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಬಿಜಾಪುರ ಬುಲ್ಸ್ ತಂಡಕ್ಕೂ ಫಿಸಿಯೊ ಆಗಿದ್ದರು.

ಇದೀಗ ಮುಂಬೈ ಇಂಡಿಯನ್ಸ್ ತಂಡದ ಪರ ಕೆಲಸ ಮಾಡುವ ಅವಕಾಶ ಕನ್ನಡಿಗ ನಾಗೇಂದ್ರ ಪ್ರಸಾದ್ ಅವರಿಗೆ ಸಿಕ್ಕಿದೆ. ರಿಲಾಯನ್ಸ್ ಮಾಲೀಕ ಮುಕೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ ಒಡೆತನದ ಮುಂಬೈ ಇಂಡಿಯನ್ಸ್ ತಂಡವನ್ನು ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಮುನ್ನಡಸಲಿದ್ದಾರೆ. ಯುವರಾಜ್ ಸಿಂಗ್, ಜಸ್ಪ್ರೀತ್ ಬುಮ್ರಾ, ಬೆನ್ ಕಟ್ಟಿಂಗ್, ಕ್ವಿಂಟನ್ ಡಿ’ಕಾಕ್, ಲಸಿತ್ ಮಾಲಿಂಗ, ಹಾರ್ದಿಕ್ ಪಾಂಡ್ಯ, ಕೃಣಾಲ್ ಪಾಂಡ್ಯ, ಕೀರನ್ ಪೊಲ್ಲಾರ್ಡ್ ಅವರಂತಹ ಖ್ಯಾತ ಆಟಗಾರರು ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದಾರೆ.

ಮಾರ್ಚ್ 4ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ.

LEAVE A REPLY

Please enter your comment!
Please enter your name here

four × five =