ಐಪಿಎಲ್’ನಲ್ಲಿ ರೋಹಿತ್, ಕೊಹ್ಲಿಗಿಂತ ಬೆಸ್ಟ್ ನಮ್ಮ ದ್ರಾವಿಡ್..!

0
PC: Twitter/Johns.
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಆಧುನಿಕ ಕ್ರಿಕೆಟ್’ನ ಬ್ಯಾಟಿಂಗ್ ದಿಗ್ಗಜರು. ಐಪಿಎಲ್’ನಲ್ಲೂ ಇವರಿಬ್ಬರು ಅಮೋಘ ದಾಖಲೆ ಹೊಂದಿದ್ದಾರೆ.
ಆದರೆ ಕರ್ನಾಟಕದ ಬ್ಯಾಟಿಂಗ್ ದಿಗ್ಗಜ ರಾಹುಲ್ ದ್ರಾವಿಡ್ ಐಪಿಎಲ್’ನಲ್ಲಿ ಕೊಹ್ಲಿ ಮತ್ತು ರೋಹಿತ್ ಶರ್ಮಾಗಿಂತ ಬೆಸ್ಟ್. ಐಪಿಎಲ್ ಟೂರ್ನಿಯಲ್ಲಿ ಅತೀ ವೇಗವಾಗಿ 2000 ರನ್ ಗಳಿಸಿದ ಆಟಗಾರರ ಪೈಕಿ ಕೊಹ್ಲಿ ಮತ್ತು ರೋಹಿತ್’ಗಿಂತ ದ್ರಾವಿಡ್ ಮುಂದಿದ್ದಾರೆ.
ದ್ರಾವಿಡ್ 75 ಪಂದ್ಯಗಳಲ್ಲಿ 2000 ಐಪಿಎಲ್ ರನ್ ಪೂರ್ತಿಗೊಳಿಸಿದರೆ, ರೋಹಿತ್ 77 ಪಂದ್ಯಗಳಲ್ಲಿ ಹಾಗೂ ಕೊಹ್ಲಿ 79 ಪಂದ್ಯಗಳಲ್ಲಿ 2 ಸಾವಿರ ರನ್ ಪೂರ್ತಿಗೊಳಿಸಿದ್ದಾರೆ.
ಭಾರತ ತಂಡದ ಮಾಜಿ ನಾಯಕರೂ ಆಗಿರುವ ದ್ರಾವಿಡ್, ಐಪಿಎಲ್’ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳನ್ನು ಮುನ್ನಡೆಸಿದ್ದಾರೆ.

LEAVE A REPLY

Please enter your comment!
Please enter your name here

three + nine =