ಐಪಿಎಲ್-12: ಚೆನ್ನೈಗೆ ಹಾರಿದ ರಾಯಲ್ ಚಾಲೆಂಜರ್ಸ್, ಮಾರ್ಚ್ 23ಕ್ಕೆ ಸಿಎಸ್‌ಕೆ ವಿರುದ್ಧ ಬೆಂಕಿ ಮ್ಯಾಚ್..!

0
PC: Virat Kohli/Twitter

ಬೆಂಗಳೂರು, ಮಾರ್ಚ್ 21: ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್-12 ಟೂರ್ನಿಯ ಉದ್ಘಾಟನಾ ಪಂದ್ಯಕ್ಕಾಗಿ ಚೆನ್ನೈಗೆ ಪ್ರಯಾಣಿಸಿದೆ.

ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಒಂದು ವಾರ ಅಭ್ಯಾಸ ನಡೆಸಿದ ರಾಯಲ್ ಚಾಲೆಂಜರ್ಸ್, ಚೆನ್ನೈಗೆ ತೆರಳಿದ್ದು ಮಾರ್ಚ್ 23ರಂದು ಚೆಪಾಕ್ ಕ್ರೀಡಾಂಗಣದಲ್ಲಿ ನಡೆಯಲಿರುವ ಟೂರ್ನಿಯ ಮೊದಲ ಪಂದ್ಯದಲ್ಲಿ ಎಂ.ಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಸೆಣಸಲಿದೆ.

ಚೆನ್ನೈ ತಂಡ ಇದುವರೆಗೆ 3 ಬಾರಿ ಚಾಂಪಿಯನ್ ಆಗಿದ್ದರೆ, ಮೊದಲ ಸೀಸನ್ ನಿಂದಲೂ ಆಡುತ್ತಿರುವ ರಾಯಲ್ ಚಾಲೆಂಜರ್ಸ್ ಇಲ್ಲಿಯವರೆಗೆ 3 ಬಾರಿ ಫೈನಲ್ ಪ್ರವೇಶಿಸಿದ್ದರೂ, ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲ.

ಪಿಎಲ್-12: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಳಾಪಟ್ಟಿ

ಮಾರ್ಚ್ 23: Vs ಚೆನ್ನೈ ಸೂಪರ್ ಕಿಂಗ್ಸ್ (ಚೆನ್ನೈ)

ಮಾರ್ಚ್ 28: Vs ಮುಂಬೈ ಇಂಡಿಯನ್ಸ್ (ಬೆಂಗಳೂರು)

ಮಾರ್ಚ್ 31: Vs ಸನ್ ರೈಸರ್ಸ್ ಹೈದರಾಬಾದ್ (ಹೈದರಾಬಾದ್)

ಏಪ್ರಿಲ್ 02: Vs ರಾಜಸ್ಥಾನ್ ರಾಯಲ್ಸ್ (ಜೈಪುರ)

ಏಪ್ರಿಲ್ 05: Vs ಕೋಲ್ಕತ್ತ ನೈಟ್ ರೈಡರ್ಸ್ (ಬೆಂಗಳೂರು)

ಏಪ್ರಿಲ್ 07: Vs ಡೆಲ್ಲಿ ಕ್ಯಾಪಿಟಲ್ಸ್ (ಬೆಂಗಳೂರು)

ಏಪ್ರಿಲ್ 13: Vs ಕಿಂಗ್ಸ್ ಇಲೆವೆನ್ ಪಂಜಾಬ್ (ಚಂಡೀಗಢ)

ಏಪ್ರಿಲ್ 15: Vs ಮುಂಬೈ ಇಂಡಿಯನ್ಸ್ (ಮುಂಬೈ)

ಏಪ್ರಿಲ್ 19: Vs ಕೋಲ್ಕತ್ತ ನೈಟ್ ರೈಡರ್ಸ್ (ಕೋಲ್ಕತ್ತ)

ಏಪ್ರಿಲ್ 21: Vs ಚೆನ್ನೈ ಸೂಪರ್ ಕಿಂಗ್ಸ್ (ಬೆಂಗಳೂರು)

ಏಪ್ರಿಲ್ 24: Vs ಕಿಂಗ್ಸ್ ಇಲೆವೆನ್ ಪಂಜಾಬ್ (ಬೆಂಗಳೂರು)

ಏಪ್ರಿಲ್ 28: Vs ಡೆಲ್ಲಿ ಕ್ಯಾಪಿಟಲ್ಸ್ (ದೆಹಲಿ)

ಏಪ್ರಿಲ್ 30: Vs ರಾಜಸ್ಥಾನ್ ರಾಯಲ್ಸ್ (ಬೆಂಗಳೂರು)

ಮೇ 04: Vs ಸನ್ ರೈಸರ್ಸ್ ಹೈದರಾಬಾದ್ (ಬೆಂಗಳೂರು)

LEAVE A REPLY

Please enter your comment!
Please enter your name here

four × one =