ಜಸ್ಪ್ರೀತ್ ಬುಮ್ರಾ ಭುಜಕ್ಕೆ ಗಾಯ… ವಿಶ್ವಕಪ್ ಟಿಕೆಟ್ ಮಿಸ್..?

0

ಮುಂಬೈ, ಮಾರ್ಚ್ 24: ಮುಂಬೈ ಇಂಡಿಯನ್ಸ್ ತಂಡದ ವೇಗದ ಬೌಲರ್ ಜಸ್ಪ್ರಿತ್ ಬುಮ್ರಾ ಎಡ ಭುಜದ ನೋವಿಗೆ ಒಳಗಾಗಿದ್ದು, ವಿಶ್ವಕಪ್ ಟೂರ್ನಿಯಲ್ಲಿ ಆಡುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.

ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಬೂಮ್ರಾ ಗಾಯಗೊಂಡಿದ್ದಾರೆ. ಡೆಲ್ಲಿ ಇನ್ನಿಂಗ್ಸ್ ನ ಕೊನೆಯ ಎಸೆತದಲ್ಲಿ ತಮ್ಮದೇ ಬೌಲಿಂಗ್ ನಲ್ಲಿ ರಿಷಭ್ ಪಂತ್ ಬಾರಿಸಿದ ಚೆಂಡನ್ನು ತಡೆಯಲು ಬುಮ್ರಾ ತಮ್ಮ ಎಡಭಾಗಕ್ಕೆ ಜಿಗಿದಾಗ ಎಡಭುಜಕ್ಕೆ ಗಾಯವಾಗಿದೆ. ಕೂಡಲೇ ಮೈದಾನಕ್ಕೆ ಬಂದ ಫಿಸಿಯೊ ನಿತಿನ್ ಪಟೇಲ್, ಬೂಮ್ರಾ ಅವರನ್ನು ಡಗೌಟ್ ಗೆ ಕರೆದೊಯ್ದರು.

ಗಾಯದ ಪ್ರಮಾಣದ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬರಬೇಕಿದ್ದು, ಜೂನ್ ನಲ್ಲಿ ಇಂಗ್ಲೆಂಡ್ ನಲ್ಲಿ ನಡೆಯಲಿರುವ ಐಸಿಸಿ ವಿಶ್ವಕಪ್ ಟೂರ್ನಿಗೆ ಬೂಮ್ರಾ ಅಲಭ್ಯರಾದರೂ ಅಚ್ಚರಿಯಿಲ್ಲ.

LEAVE A REPLY

Please enter your comment!
Please enter your name here

10 − nine =