ಇಂಗ್ಲೆಂಡ್‌ನ ಕಿಯಾ ಸೂಪರ್ ಲೀಗ್‌ನಲ್ಲಿ ಆಡಲಿರುವ ಕುಡ್ಲದ ಕುವರಿ..!

0

ಬೆಂಗಳೂರು, ಜೂನ್ 13: ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿ ಜೆಮೈಮಾ ರಾಡ್ರಿಗ್ಸ್ ಇಂಗ್ಲೆಂಡ್ ನ ಕಿಯಾ ಸೂಪರ್ ಲೀಗ್ ಟಿ20 ಟೂರ್ನಿಯಲ್ಲಿ ಆಡಲಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಯಾರ್ಕ್ಸ್ ಡೈಮಂಡ್ಸ್ ತಂಡದ ಪರ ಆಡಲು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

ಈ ಸಂಭ್ರಮವನ್ನು ಜೆಮೈಮಾ ಟ್ವಿಟರ್ ಮೂಲಕ ಹಂಚಿಕೊಂಡಿದ್ದಾರೆ. ಮಂಗಳೂರು ಮೂಲದವರಾದ ಜೆಮೈಮಾ ರಾಡ್ರಿಗ್ಸ್ ಮುಂಬೈನಲ್ಲಿ ನೆಲೆಸಿದ್ದಾರೆ. ಕಿರಿಯರ ಕ್ರಿಕೆಟ್ ನಲ್ಲಿ ಮುಂಬೈ ತಂಡವನ್ನು ಪ್ರತಿನಿಧಿಸಿರುವ ಬಲಗೈ ಬ್ಯಾಟರ್ ಜೆಮೈಮಾ, ಕಳೆದ ವರ್ಷ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು. ಭಾರತ ಪರ 10 ಏಕದಿನ ಹಾಗೂ 25 ಟಿ20 ಪಂದ್ಯಗಳನ್ನಾಡಿರುವ 18 ವರ್ಷದ ಜಮೈಮಾ ಭಾರತೀಯ ಮಹಿಳಾ ಕ್ರಿಕೆಟ್ ನ ಭವಿಷ್ಯದ ತಾರೆ ಎಂದೇ ಬಿಂಬಿತವಾಗಿದ್ದಾರೆ. ಐಸಿಸಿ ಮಹಿಳಾ ಟಿ20 ಬ್ಯಾಟಿಂಗ್ ರ್ಯಾಂಕಿಂಗ್ ನಲ್ಲಿ ಜೆಮೈಮಾ ರಾಡ್ರಿಗ್ಸ್ 5ನೇ ಸ್ಥಾನದಲ್ಲಿದ್ದಾರೆ.

https://twitter.com/JemiRodrigues/status/1138844442410999808

LEAVE A REPLY

Please enter your comment!
Please enter your name here

twenty + nineteen =