‘ರಾಯಲ್’ ಕನ್ನಡಿಗನಿಗೆ ‘ಥಲಾ’ ಧೋನಿಯಿಂದ ವಿಶೇಷ ಉಡುಗೊರೆ..!

0
PC: Gowtham/Facebook

ಬೆಂಗಳೂರು, ಏಪ್ರಿಲ್ 10: ಕ್ಯಾಪ್ಟನ್ ಕೂಲ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಜಗತ್ತಿನ ದಿಗ್ಗಜ ಆಟಗಾರ ಮತ್ತು ದಿಗ್ಗಜ ನಾಯಕ. ಭಾರತಕ್ಕೆ ಎರಡು ವಿಶ್ವಕಪ್ ಗಳನ್ನು ಗೆದ್ದುಕೊಟ್ಟಿರುವ ಲೆಜೆಂಡ್ ಎಂ.ಎಸ್ ಧೋನಿ. ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 3 ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿರುವ ಧೋನಿ ಅಂದ್ರೆ ಯುವ ಆಟಗಾರರಿಗೆ ಅಚ್ಚುಮೆಚ್ಚು.

ಧೋನಿ ಅವರಿಂದ ಕ್ರಿಕೆಟ್ ಪಾಠ ಹೇಳಿಸಿಕೊಳ್ಳಲು ಯುವ ಕ್ರಿಕೆಟಿಗರು ಹಾತೊರೆಯುತ್ತಾರೆ. ಅಷ್ಟೇ ಅಲ್ಲ, ಧೋನಿ ಅವರಿಂದ ಆಟೋಗ್ರಾಫ್ ಪಡೆಯಲು ಉತ್ಸುಕರಾಗಿರುತ್ತಾರೆ. ಐಪಿಎಲ್-12 ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿರುವ ಕರ್ನಾಟಕದ ಆಲ್ರೌಂಡರ್ ಕೆ.ಗೌತಮ್ ಅವರಿಗೆ ಧೋನಿ ಆಟೋಗ್ರಾಫ್ ಸಿಕ್ಕಿದೆ. ಮತ್ತೊಂದು ವಿಶೇಷ ಅಂದ್ರೆ ಧೋನಿ ಅವರಂತೆ ಕೆ.ಗೌತಮ್ ಅವರ ಜರ್ಸಿ ನಂಬರ್ ಕೂಡ 7.

ಮಾರ್ಚ್ 31ರಂದು ಚೆನ್ನೈನಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯದ ನಂತರ ಧೋನಿ ಬಳಿ ತೆರಳಿದ ಗೌತಮ್, ತಮ್ಮ ಬ್ಯಾಟ್ ಗೆ ಧೋನಿ ಆಟೋಗ್ರಾಫ್ ಪಡೆದಿದ್ದಾರೆ. ಇದಕ್ಕೂ ಮೊದಲು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ಆಡುತ್ತಿರುವ ಮತ್ತೊಬ್ಬ ಕನ್ನಡಿಗ ಮಯಾಂಕ್ ಅಗರ್ವಾಲ್ ಅವರಿಗೆ ಧೋನಿ ಕ್ರಿಕೆಟ್ ಪಾಠ ಹೇಳಿ ಕೊಟ್ಟಿದ್ದರು.

LEAVE A REPLY

Please enter your comment!
Please enter your name here

two + 19 =