ಮುಷ್ತಾಕ್ ಅಲಿ ಟಿ20 ಸೂಪರ್ ಲೀಗ್: ಕೌಶಿಕ್, ಕಾರಿಯಪ್ಪ ಬೆಂಕಿ ಬೌಲಿಂಗ್.. ಕರ್ನಾಟಕ ಹ್ಯಾಟ್ರಿಕ್

0

ಇಂದೋರ್, ಮಾರ್ಚ್ 10: ಕರ್ನಾಟಕದ ಯುವ ವೇಗದ ಬೌಲರ್ ವಿ.ಕೌಶಿಕ್ ಮತ್ತು ಮಿಸ್ಟರಿ ಸ್ಪಿನ್ನರ್ ಕೆ.ಸಿ ಕಾರಿಯಪ್ಪ ದಾಳಿಗೆ ದೆಹಲಿ ತಂಡ ಉಡೀಸ್ ಆಗಿದೆ. ದೆಹಲಿ ತಂಡವನ್ನು 8 ವಿಕೆಟ್ ಗಳಿಂದ ಸೋಲಿಸಿದ ಕರ್ನಾಟಕ ತಂಡ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ಸೂಪರ್ ಲೀಗ್ ಹಂತದಲ್ಲಿ ಹ್ಯಾಟ್ರಿಕ್ ಗೆಲುವು ದಾಖಲಿಸಿದೆ. ಇದು ಲೀಗ್ ಪಂದ್ಯಗಳೂ ಸೇರಿದಂತೆ ಪ್ರಸಕ್ತ ಟೂರ್ನಿಯಲ್ಲಿ ಕರ್ನಾಟಕ ದಾಖಲಿಸಿದ ಸತತ 11ನೇ ಗೆಲುವಾಗಿದೆ.

ಎಮೆರಾಲ್ಡ್ ಹೈಟ್ಸ್ ಇಂಟರ್ ನ್ಯಾಷನಲ್ ಸ್ಕೂಲ್ ಗ್ರೌಂಡ್ ನಲ್ಲಿ ಟಾಸ್ ಗೆದ್ದ ಕರ್ನಾಟಕ ತಂಡದ ನಾಯಕ ಮನೀಶ್ ಪಾಂಡೆ ಫೀಲ್ಡಿಂಗ್ ಆಯ್ದುಕೊಂಡರು. ಬ್ಯಾಟಿಂಗ್ ಆರಂಭಿಸಿದ ದೆಹಲಿ ಮೇಲೆ ಕೌಶಿಕ್ ಮತ್ತು ಕಾರಿಯಪ್ಪ ಮಾರಕವಾಗಿ ಎರಗಿದರು. ಇವರಿಬ್ಬರ ವೇಗ ಮತ್ತು ಸ್ಪಿನ್ ದಾಳಿಯ ಎಫೆಕ್ಟ್ ಹೇಗಿತ್ತೆಂದರೆ ದೆಹಲಿ ಬ್ಯಾಟಿಂಗ್ ಕ್ರಮಾಂಕದ ಮೊದಲ ಏಳು ಆಟಗಾರರು ಕೌಶಿಕ್ ಮತ್ತು ಕಾರಿಯಪ್ಪಗೆ ವಿಕೆಟ್ ಒಪ್ಪಿಸಿದರು.

ಕಳೆದ ಪಂದ್ಯದಲ್ಲಿ ಉತ್ತರ ಪ್ರದೇಶ ವಿರುದ್ಧ 3 ವಿಕೆಟ್ ಪಡೆದು ಮಿಂಚಿದ್ದ ಕೌಶಿಕ್ ದೆಹಲಿ ವಿರುದ್ಧ 4 ಓವರ್ ಗಳಲ್ಲಿ ಕೇವಲ 19 ರನ್ನಿತ್ತು 4 ವಿಕೆಟ್ ಉಡಾಯಿಸಿದರು. ಸ್ಪಿನ್ನರ್ ಕೆ.ಸಿ ಕಾರಿಯಪ್ಪ 4 ಓವರ್ ಗಳಲ್ಲಿ 15 ರನ್ನಿತ್ತು 3 ವಿಕೆಟ್ ಕಬಳಿಸಿದರು. ಕೌಶಿಕ್ ಮತ್ತು ಕಾರಿಯಪ್ಪ ದಾಳಿಗೆ ಧೂಳೀಪಟಗೊಂಡ ದೆಹಲಿ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 109 ರನ್ ಗಳ ಅಲ್ಪ ಮೊತ್ತಕ್ಕೆ ಕುಸಿಯಿತು. 

ನಂತರ ಸುಲಭ ಗುರಿ ಬೆನ್ನಟ್ಟಿದ ಕರ್ನಾಟಕ 15.3 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 112 ರನ್ ಗಳಿಸಿ ಸೂಪರ್ ಲೀಗ್ ನಲ್ಲಿ ಸತತ 3ನೇ ಜಯ ದಾಖಲಿಸಿತು. ಮಯಾಂಕ್ ಅಗರ್ವಾಲ್ 47 ಎಸೆತಗಳಲ್ಲಿ ಅಜೇಯ 43 ರನ್ ಗಳಿಸಿದರೆ, ಉಪನಾಯಕ ಕರುಣ್ ನಾಯರ್ 23 ಎಸೆತಗಳಲ್ಲಿ ಕೇವಲ 42 ರನ್ ಸಿಡಿಸಿದರು. ಈ ಗೆಲುವಿನಿನೊಂದಿಗೆ ಮನೀಶ್ ಪಾಂಡೆ ಬಳಗ ಫೈನಲ್ ಹಂತಕ್ಕೆ ಮತ್ತಷ್ಟು ಹತ್ತಿರವಾಯಿತು.

Brief scores

Delhi: 109/9 in 20 overs (Nitish Rana 37, Lalit Yadav 33; V Koushik 4/19, KC Cariyappa 3/15, R Vinay Kumar 1/13) lost to Karnataka: 112/2 in 15.3 overs (BR Sharath 25, Mayank Agarwal 43 not out, Karun Nair 42 not out; Navdeep Saini 1/21) by 8 wickets.

LEAVE A REPLY

Please enter your comment!
Please enter your name here

one + 13 =