ಮಹಿಳಾ ಟಿ20 ಲೀಗ್ ಫೈನಲ್: ಕ್ಯಾಚ್ ಬಿಟ್ಟು ಮ್ಯಾಚ್ ಸೋತ ಕರ್ನಾಟಕದ ವನಿತೆಯರು

0

ಮುಂಬೈ, ಮಾರ್ಚ್ 13: ಬಿಸಿಸಿಐ ಸೀನಿಯರ್ ಮಹಿಳಾ ಟಿ20 ಲೀಗ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಪಂಜಾಬ್ ವಿರುದ್ಧ 4 ರನ್ ಗಳ ಸೋಲು ಕಂಡು ರನ್ನರ್ಸ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟಿದೆ.

15 ವರ್ಷಗಳ ನಂತರ ಫೈನಲ್ ಪ್ರವೇಶಿಸಿದ್ದ ಕರ್ನಾಟಕ ತಂಡ ಗೆಲುವಿನ ಹೊಸ್ತಿಲಲ್ಲಿ ಮುಗ್ಗರಿಸಿತು. ಗೆಲ್ಲಲು 132 ರನ್ ಗುರಿ ಪಡೆದಿದ್ದ ಕರ್ನಾಟಕ ದಿವ್ಯಾ ಜ್ಞಾನಾನಂದ್(41) ಮತ್ತು ಸಿ.ಪ್ರತ್ಯೂಷಾ(ಅಜೇಯ 35) ಅವರ ಉತ್ತಮ ಆಟದಿಂದಾಗಿ ಜಯದ ಹಾದಿಯಲ್ಲಿತ್ತು. ಆದರೆ ಕೊನೆಯ ಓವರ್ ನಲ್ಲಿ 6 ರನ್ ಗಳಿಸಬೇಕಿದ್ದ ಕರ್ನಾಟಕ ಕೇವಲ 2 ರನ್ ಗಳಿಸಿ ಗೆಲುವು ಕೈ ಚೆಲ್ಲಿತು. 31 ಎಸೆತಗಳಲ್ಲಿ ಅಜೇಯ 35 ರನ್ ಗಳಿಸಿ ಪ್ರತ್ಯೂಷಾ ಕೊನೆಯ ಓವರ್ ನಲ್ಲಿ ತಂಡವನ್ನು ಜಯದ ದಡ ಸೇರಿಸಲು ವಿಫಲಗೊಂಡರು. ಅನುಭವಿ ಓಪನರ್ ವಿ.ಆರ್ ವನಿತಾ(13) ಮತ್ತು ನಾಯಕಿ ರಕ್ಷಿತಾ ಕೃಷ್ಣಪ್ಪ(7) ಅವರ ವೈಫಲ್ಯ ತಂಡಕ್ಕೆ ಮಾರಕವಾಯಿತು.

ಮುಂಬೈನಲ್ಲಿ ನಡೆದ ಸೂಪರ್ ಲೀಗ್ ಹಂತದಲ್ಲಿ ಆಡಿದ ನಾಲ್ಕು ಪಂದ್ಯಗಳಲ್ಲಿ ಮೂರನ್ನು ಗೆದ್ದು ಒಂದು ಪಂದ್ಯದಲ್ಲಿ ಸೋಲು ಕಂಡ ಕರ್ನಾಟಕ 12 ಅಂಕಗಳೊಂದಿಗೆ ‘ಬಿ’ಗುಂಪಿನ ಅಗ್ರಸ್ಥಾನಿಯಾಗಿ ಫೈನಲ್ ಪ್ರವೇಶಿಸಿತ್ತು.

ಪಂಜಾಬ್ ತಂಡದ ಬ್ಯಾಟಿಂಗ್ ವೇಳೆ ಆರಂಭಿಕ ಆಟಗಾರ್ತಿ ಜೆಸಿಯಾ ಅಖ್ತರ್ ಅವರಿಗೆ 5 ಜೀವದಾನ ನೀಡಿದ ಕರ್ನಾಟಕದ ಆಟಗಾರ್ತಿಯರು ಕೊನೆಯಲ್ಲಿ ಅದಕ್ಕೆ ಬೆಲೆ ತೆತ್ತರು. 4 ಕ್ಯಾಚ್ ಹಾಗೂ ಒಂದು ಸ್ಟಂಪಿಂಗ್ ಜೀವದಾನವನ್ನು ಬಳಸಿಕೊಂಡ ಅಖ್ತರ್ 54 ಎಸೆತಗಳಲ್ಲಿ 56 ರನ್ ಸಿಡಿಸಿ ಪಂಜಾಬ್ ಗೆಲುವಿಗೆ ಕಾರಣರಾದರು.

Brief scores

Punjab: 131/7 in 20 overs (Jasia Akhter 56, Neelam Bisht 27; Simren Henry 2/26, Divya Gnananand 2/24) beat Karnataka: 127/6 in 20 overs (Divya Gnananand 41, C Prathyusha 35 not out; Komalpreet Kour 2/22, Sunita Rani 2/19, Neelam Bisht 1/24) by 4 runs.

LEAVE A REPLY

Please enter your comment!
Please enter your name here

sixteen + eighteen =