TNPL: ಮಧುರೈ ಪ್ಯಾಂಥರ್ಸ್ ತಂಡಕ್ಕೆ ಕನ್ನಡಿಗ ದೊಡ್ಡ ಗಣೇಶ್ ಕೋಚ್

0

ಬೆಂಗಳೂರು, ಜುಲೈ 16: ಕರ್ನಾಟಕದ ಮಾಜಿ ದಿಗ್ಗಜ ವೇಗದ ಬೌಲರ್ ದೊಡ್ಡ ಗಣೇಶ್, ಪ್ರಸಕ್ತ ಸಾಲಿನ ತಮಿಳುನಾಡು ಪ್ರೀಮಿಯರ್ ಲೀಗ್ನಲ್ಲಿ ಹಾಲಿ ಚಾಂಪಿಯನ್ ಮಧುರೈ ಪ್ಯಾಂಥರ್ಸ್ ತಂಡದ ಪ್ರಧಾನ ಕೋಚ್ ಆಗಿ ನೇಮಕಗೊಂಡಿದ್ದಾರೆ.

ಕಳೆದ ಸಾಲಿನ ಟೂರ್ನಿಯಲ್ಲಿ ಮಧುರೈ ತಂಡ ಕರ್ನಾಟಕದ ಮತ್ತೊಬ್ಬ ದಿಗ್ಗಜ ಕ್ರಿಕೆಟಿಗ ಜೆ.ಅರುಣ್ ಕುಮಾರ್ ಮಾರ್ಗದರ್ಶನದಲ್ಲಿ ಚಾಂಪಿಯನ್ ಆಗಿತ್ತು. ಈ ಬಾರಿ ಹಾಲಿ ಚಾಂಪಿಯನ್ನರಿಗೆ ದೊಡ್ಡ ಗಣೇಶ್ ಮಾರ್ಗದರ್ಶನ ನೀಡಲಿದ್ದಾರೆ. ತಮಿಳುನಾಡಿನ ಅನುಭವಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಕೆ.ಬಿ ಅರುಣ್ ಕಾರ್ತಿಕ್ ಮಧುರೈ ತಂಡದ ನಾಯಕರಾಗಿದ್ದಾರೆ. ರಾಜಸ್ಥಾನದ ಮಾಜಿ ವಿಕೆಟ್ ಕೀಪರ್ ದಿಶಾಂತ್ ಯಜ್ಞಿಕ್ ಸಹಾಯಕ ಕೋಚ್ ಆಗಿ ನೇಮಕಗೊಂಡಿದ್ದಾರೆ.

ರಾಜ್ಯದ ಮಾಜಿ ರಣಜಿ ಹೀರೊ ದೊಡ್ಡ ಗಣೇಶ್ ಭಾರತ ಪರ ನಾಲ್ಕು ಟೆಸ್ಟ್ ಹಾಗೂ ಒಂದು ಏಕದಿನ ಪಂದ್ಯವನ್ನಾಡಿದ್ದಾರೆ. 46 ವರ್ಷದ ದೊಡ್ಡ ಗಣೇಶ್ 104 ಪ್ರಥಮದರ್ಜೆ ಪಂದ್ಯಗಳನ್ನಾಡಿದ್ದು, 365 ವಿಕೆಟ್ ಪಡೆದಿದ್ದಾರೆ. ಅಲ್ಲದೆ 89 ಲಿಸ್ಟ್ ಎ ಪಂದ್ಯಗಳಿಂದ 128 ವಿಕೆಟ್ ಕಬಳಿಸಿದ್ದಾರೆ.

4ನೇ ಆವೃತ್ತಿಯ ತಮಿಳುನಾಡು ಪ್ರೀಮಿಯರ್ ಲೀಗ್ ಟೂರ್ನಿ ಜುಲೈ 19ರಂದು ಆರಂಭವಾಗಲಿದೆ. 

LEAVE A REPLY

Please enter your comment!
Please enter your name here

2 × one =