ಮುಷ್ತಾಕ್ ಅಲಿ ಟಿ20 ಫೈನಲ್: ನಾಳೆ ಕರ್ನಾಟಕ Vs ಮಹಾರಾಷ್ಟ್ರ ಫೈಟ್… ಇಲ್ಲಿದೆ ಕಂಪ್ಲೀಟ್ ಗೈಡ್

0

ಇಂದೋರ್, ಮಾರ್ಚ್ 13: ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ಫೈನಲ್ ಪಂದ್ಯ ನಾಳೆ ಇಂದೋರ್ ನ ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಮನೀಶ್ ಪಾಂಡೆ ನಾಯಕತ್ವದ ಕರ್ನಾಟಕ ತಂಡ ಮಹಾರಾಷ್ಟ್ರ ತಂಡವನ್ನು ಎದುರಿಸಲಿದೆ.

ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಕರ್ನಾಟಕ ತಂಡ ಮೊದಲ ಬಾರಿ ಫೈನಲ್ ಪ್ರವೇಶಿಸಿದ್ದು, ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡವಾಗಿದೆ. ಲೀಗ್ ಹಂತ ಹಾಗೂ ಸೂಪರ್ ಲೀಗ್ ಹಂತದಲ್ಲಿ ಸೋಲನ್ನೇ ಕಾಣದ ಕರ್ನಾಟಕ ತಂಡ ಸತತ 11 ಗೆಲುವುಗಳೊಂದಿಗೆ ಫೈನಲ್ ತಲುಪಿದೆ. ಅಲ್ಲದೆ ಭಾರತದ ದೇಶೀಯ ಕ್ರಿಕೆಟ್ ನಲ್ಲಿ ಸತತವಾಗಿ 13 ಟಿ20 ಪಂದ್ಯಗಳನ್ನು ಗೆದ್ದ ಮೊದಲ ಕ್ರಿಕೆಟ್ ಸಂಸ್ಥೆ ಎಂಬ ದಾಖಲೆಗೆ ಕರ್ನಾಟಕ ಪಾತ್ರವಾಗಿದೆ. ಕಳೆದ ವರ್ಷದ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ಸೂಪರ್ ಲೀಗ್ ಹಂತದ ತನ್ನ ಕೊನೆಯ ಎರಡು ಪಂದ್ಯಗಳನ್ನು ಗೆದ್ದಿತ್ತು.

ಕರ್ನಾಟಕ Vs ಮಹಾರಾಷ್ಟ್ರ ಫೈನಲ್

Place: ಹೋಳ್ಕರ್ ಕ್ರೀಡಾಂಗಣ, ಇಂದೋರ್

Match starts: ಸಂಜೆ 5.30ಕ್ಕೆ

Live: Star Sports 2, Hotstar

ತಂಡಗಳು

ಕರ್ನಾಟಕ: ಮನೀಶ್ ಪಾಂಡೆ(ನಾಯಕ), ಕರುಣ್ ನಾಯರ್(ಉಪನಾಯಕ), ರೋಹನ್ ಕದಂ, ಬಿ.ಆರ್ ಶರತ್(ವಿಕೆಟ್ ಕೀಪರ್), ಮಯಾಂಕ್ ಅಗರ್ವಾಲ್, ಕೆ.ವಿ ಸಿದ್ಧಾರ್ಥ್, ಶ್ರೇಯಸ್ ಗೋಪಾಲ್, ಜೆ.ಸುಚಿತ್, ಮನೋಜ್ ಭಾಂಡಗೆ, ಕೆ.ಸಿ ಕಾರಿಯಪ್ಪ, ಆರ್.ವಿನಯ್ ಕುಮಾರ್, ಅಭಿಮನ್ಯು ಮಿಥುನ್, ವಿ.ಕೌಶಿಕ್, ಎಂ.ಪ್ರಸಿದ್ಧ್ ಕೃಷ್ಣ, ಲವನೀತ್ ಸಿಸೋಡಿಯಾ(ವಿಕೆಟ್ ಕೀಪರ್).

ಮಹಾರಾಷ್ಟ್ರ: ರಾಹುಲ್ ತ್ರಿಪಾಠಿ(ನಾಯಕ), ಅಂಕಿತ್ ಬಾವ್ನೆ, ನೌಶದ್ ಶೇಖ್, ಸತ್ಯಜೀತ್ ಬಚ್ಚವ್, ಸಮದ್ ಫಲ್ಲಾ, ರುತುರಾಜ್ ಗಾಯಕ್ವಾಡ್, ವಿಶಾಲ್ ಗೀತೆ, ಸ್ವಪ್ನಿಲ್ ಗುಗಾಲೆ, ದಿವ್ಯಾಂಗ್ ಹಿಮ್ಗಾನೇಕರ್, ಮನೋಜ್ ಇನ್ಗಾಲೆ, ಅಮೀಜ್ ಕಾಜಿ, ನಿಖಿಲ್ ನಾಯ್ಕ್, ಹಿತೇಶ್ ವಲುಂಜ್, ಯಶ್ ನಹರ್, ವಿಜಯ್ ಜೋಲ್.

ಕರ್ನಾಟಕದ ಫೈನಲ್ ಹಾದಿ

1.        ಅಸ್ಸಾಂ ವಿರುದ್ಧ 15 ರನ್ ಜಯ (ಲೀಗ್)

2.        ಬಂಗಾಳ ವಿರುದ್ಧ 9 ವಿಕೆಟ್ ಜಯ (ಲೀಗ್)

3.        ಅರುಣಾಚಲ ಪ್ರದೇಶ ವಿರುದ್ಧ 146 ರನ್ ಜಯ (ಲೀಗ್)

4.        ಮಿಜೋರಾಂ ವಿರುದ್ಧ 137 ರನ್ ಜಯ (ಲೀಗ್)

5.        ಛತ್ತೀಸ್ ಗಢ ವಿರುದ್ಧ 4 ವಿಕೆಟ್ ಜಯ (ಲೀಗ್)

6.        ಒಡಿಶಾ ವಿರುದ್ಧ 51 ರನ್ ಜಯ (ಲೀಗ್)

7.        ಹರ್ಯಾಣ ವಿರುದ್ಧ 14 ರನ್ ಜಯ (ಲೀಗ್)

8.        ಮುಂಬೈ ವಿರುದ್ಧ 9 ವಿಕೆಟ್ ಜಯ (ಸೂಪರ್ ಲೀಗ್)

9.        ಉತ್ತರ ಪ್ರದೇಶ ವಿರುದ್ಧ 10 ರನ್ ಜಯ (ಸೂಪರ್ ಲೀಗ್)

10.     ದೆಹಲಿ ವಿರುದ್ಧ 8 ವಿಕೆಟ್ ಜಯ (ಸೂಪರ್ ಲೀಗ್)

11.     ವಿದರ್ಭ ವಿರುದ್ಧ 6 ವಿಕೆಟ್ ಜಯ (ಸೂಪರ್ ಲೀಗ್)

ಮಹಾರಾಷ್ಟ್ರದ ಫೈನಲ್ ಹಾದಿ

1.        ಉತ್ತರ ಪ್ರದೇಶ ವಿರುದ್ಧ 12 ರನ್ ಜಯ (ಲೀಗ್)

2.        ಪುದುಚೇರಿ ವಿರುದ್ಧ 8 ವಿಕೆಟ್ ಜಯ (ಲೀಗ್)

3.        ಸರ್ವಿಸಸ್ ವಿರುದ್ಧ 6 ವಿಕೆಟ್ ಸೋಲು (ಲೀಗ್)

4.        ಹೈದರಾಬಾದ್ ವಿರುದ್ಧ 7 ವಿಕೆಟ್ ಜಯ (ಲೀಗ್)

5.        ಉತ್ತರಾಖಂಡ್ ವಿರುದ್ಧ 10 ವಿಕೆಟ್ ಜಯ (ಲೀಗ್)

6.        ಬರೋಡ ವಿರುದ್ಧ 7 ವಿಕೆಟ್ ಜಯ (ಲೀಗ್)

7.        ತ್ರಿಪುರ ವಿರುದ್ಧ ನೋ ರಿಸಲ್ಟ್ (ಲೀಗ್)

8.        ಬಂಗಾಳ ವಿರುದ್ಧ 7 ವಿಕೆಟ್ ಜಯ (ಸೂಪರ್ ಲೀಗ್)

9.        ಗುಜರಾತ್ ವಿರುದ್ಧ 4 ವಿಕೆಟ್ ಜಯ (ಸೂಪರ್ ಲೀಗ್)

10.     ಜಾರ್ಖಂಡ್ ವಿರುದ್ಧ 14 ರನ್ ಜಯ (ಸೂಪರ್ ಲೀಗ್)

11.     ರೈಲ್ವೇಸ್ ವಿರುದ್ಧ 21 ರನ್ ಜಯ (ಸೂಪರ್ ಲೀಗ್)

ಕರ್ನಾಟಕ ಪರ ಅತಿ ಹೆಚ್ಚು ರನ್

ರೋಹನ್ ಕದಂ: 476 (11 ಪಂದ್ಯ, 4 ಅರ್ಧಶತಕ)

ಮನೀಶ್ ಪಾಂಡೆ: 331 (11 ಪಂದ್ಯ, 1 ಶತಕ, 1 ಅರ್ಧಶತಕ)

ಕರುಣ್ ನಾಯರ್: 237 (11 ಪಂದ್ಯ, 1 ಅರ್ಧಶತಕ)

ಮಯಾಂಕ್ ಅಗರ್ವಾಲ್: 182 (9 ಪಂದ್ಯ)

ಕರ್ನಾಟಕ ಪರ ಅತಿ ಹೆಚ್ಚು ವಿಕೆಟ್ಸ್

ವಿ.ಕೌಶಿಕ್: 17 ವಿಕೆಟ್ಸ್ (9 ಪಂದ್ಯ)

ಶ್ರೇಯಸ್ ಗೋಪಾಲ್: 13 ವಿಕೆಟ್ಸ್ (7 ಪಂದ್ಯ)

ಆರ್.ವಿನಯ್ ಕುಮಾರ್: 13 ವಿಕೆಟ್ಸ್ (9 ಪಂದ್ಯ)

ಕೆ.ಸಿ ಕಾರಿಯಪ್ಪ: 9 ವಿಕೆಟ್ಸ್ (10 ಪಂದ್ಯ)

ಜೆ.ಸುಚಿತ್: 9 ವಿಕೆಟ್ಸ್ (11 ಪಂದ್ಯ)

ಮಹಾರಾಷ್ಟ್ರ ಪರ ಅತಿ ಹೆಚ್ಚು ರನ್

ರುತುರಾಜ್ ಗಾಯಕ್ವಾಡ್: 281 (11 ಪಂದ್ಯ, 2 ಅರ್ಧಶತಕ)

ನೌಶದ್ ಶೇಖ್: 266 (11 ಪಂದ್ಯ, 1 ಅರ್ಧಶತಕ)

ರಾಹುಲ್ ತ್ರಿಪಾಠಿ: 259 (9 ಪಂದ್ಯ, 3 ಅರ್ಧಶತಕ)

ಮಹಾರಾಷ್ಟ್ರ ಪರ ಅತಿ ಹೆಚ್ಚು ವಿಕೆಟ್ಸ್

ಸತ್ಯಜೀತ್ ಬಚ್ಚವ್: 2 ವಿಕೆಟ್ಸ್ (11 ಪಂದ್ಯ)

ಹಿಮ್ಗನೇಕರ್: 12 ವಿಕೆಟ್ಸ್ (11 ಪಂದ್ಯ)

ಸಮದ್ ಫಲ್ಲಾ: 12 ವಿಕೆಟ್ಸ್ (11 ಪಂದ್ಯ)

LEAVE A REPLY

Please enter your comment!
Please enter your name here

19 − 14 =