ಮುಷ್ತಾಕ್ ಅಲಿ ಟಿ20: ಕರ್ನಾಟಕಕ್ಕೆ ಸತತ 10ನೇ ಜಯ.. ಫೈನಲ್ ಸ್ಥಾನ ಪಕ್ಕಾ..!

0

ಇಂದೋರ್, ಮಾರ್ಚ್ 9: ಮನೀಶ್ ಪಾಂಡೆ ನಾಯಕತ್ವದ ಕರ್ನಾಟಕ ತಂಡ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ನಿರಂತರ 10ನೇ ಗೆಲುವು ದಾಖಲಿಸಿದೆ. 

ಇಂದೋರ್ ನ ಹೋಳ್ಕರ್ ಮೈದಾನದಲ್ಲಿ ನಡೆದ ತನ್ನ 2ನೇ ಸೂಪರ್ ಲೀಗ್ ಪಂದ್ಯದಲ್ಲಿ ಕರ್ನಾಟಕ ತಂಡ ಉತ್ತರ ಪ್ರದೇಶ ವಿರುದ್ಧ 10 ರನ್ ಗಳ ರೋಚಕ ಗೆಲುವು ಸಾಧಿಸಿತು. ಆ ಮೂಲಕ ಫೈನಲ್ ಗೆ ಮತ್ತಷ್ಟು ಹತ್ತಿರವಾಯಿತು. ‘ಬಿ’ ಗುಂಪಿನಲ್ಲಿರುವ ಕರ್ನಾಟಕ ತನ್ನ ಕೊನೆಯ ಎರಡು ಪಂದ್ಯಗಳಲ್ಲಿ ದೆಹಲಿ ಮತ್ತು ವಿದರ್ಭ ತಂಡಗಳನ್ನು ಎದುರಿಸಲಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಕರ್ನಾಟಕ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 149 ರನ್ ಕಲೆ ಹಾಕಿತು. ಉತ್ತಮ ಫಾರ್ಮ್ ನಲ್ಲಿರುವ ಯುವ ಆರಂಭಿಕ ಬ್ಯಾಟ್ಸ್ ಮನ್ ರೋಹನ್ ಕದಂ 30 ಎಸೆತಗಳಲ್ಲಿ 35 ರನ್ ಗಳಿಸಿದರೆ, 3ನೇ ಕ್ರಮಾಂಕದಲ್ಲಿ ಮಯಾಂಕ್ ಅಗರ್ವಾಲ್ 27 ಎಸೆತಗಳಲ್ಲಿ 33 ರನ್ ಗಳಿಸಿದರು. ಬಿ.ಆರ್ ಶರತ್(0) ಮೊದಲ ಓವರ್ ನಲ್ಲೇ ಔಟಾದ ನಂತರ ರೋಹನ್ ಮತ್ತು ಮಯಾಂಕ್ 2ನೇ ವಿಕೆಟ್ ಗೆ 60 ರನ್ ಸೇರಿಸಿದರು. ಮಧ್ಯಮ ಕ್ರಮಾಂಕದಲ್ಲಿ ಉಪ ನಾಯಕ ಕರುಣ್ ನಾಯರ್ 18 ಎಸೆತಗಳಲ್ಲಿ 21 ರನ್, ನಾಯಕ ಮನೀಶ್ ಪಾಂಡೆ 20 ಎಸೆತಗಳಲ್ಲಿ 22 ರನ್ ಮತ್ತು ಆಲ್ರೌಂಡರ್ ಮನೋಜ್ ಭಾಂಡಗೆ 19 ಎಸೆತಗಳಲ್ಲಿ 25 ರನ್ ಗಳಿಸಿದರು.

150 ರನ್ ಟಾರ್ಗೆಟ್ ಚೇಸ್ ಮಾಡಿದ ಉತ್ತರ ಪ್ರದೇಶ ತಂಡ ಕರ್ನಾಟಕ ಬೌಲರ್ ಗಳ ಬಿಗು ದಾಳಿಗೆ ತತ್ತರಿಸಿ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 139 ರನ್ ಗಳಿಸಿ ಸೋಲೊಪ್ಪಿಕೊಂಡಿತು. 14ನೇ ಓವರ್ ನಲ್ಲಿ ಕೇವಲ 1 ವಿಕೆಟ್ ಕಳೆದುಕೊಂಡು 91 ರನ್ ಗಳಿಸಿ ಗೆಲುವಿನತ್ತ ಹೆಜ್ಜೆ ಹಾಕಿದ್ದ ಉತ್ತರ ಪ್ರದೇಶಕ್ಕೆ ಕರ್ನಾಟಕದ ಬೌಲರ್ ಗಳು ಕೊನೆಯ 6 ಓವರ್ ಗಳಲ್ಲಿ ಕಡಿವಾಣ ಹಾಕಿದರು. ದಾವಣಗೆರೆ ಎಕ್ಸ್ ಪ್ರೆಸ್ ಆರ್.ವಿನಯ್ ಕುಮಾರ್ 19ನೇ ಓವರ್ ನಲ್ಲಿ ಎರಡು ವಿಕೆಟ್ ಮತ್ತು ಯುವ ವೇಗಿ ವಿ.ಕೌಶಿಕ್ 20ನೇ ಓವರ್ ನಲ್ಲಿ 2 ವಿಕೆಟ್ ಉರುಳಿಸಿ ಕರ್ನಾಟಕದ ಗೆಲುವಿನ ರೂವಾರಿಗಳಾದರು.

ಬಿಗು ದಾಳಿ ಸಂಘಟಿಸಿದ ಕೌಶಿಕ್ 4 ಓವರ್ ಗಳಲ್ಲಿ 11 ಡಾಟ್ ಬಾಲ್ ಸಹಿತ ಕೇವಲ 22 ರನ್ ನೀಡಿ 3 ವಿಕೆಟ್ ಕಬಳಿಸಿದರು. 

Brief scores 

Karnataka: 149/6 in 20 overs (Rohan Kadam 35, Mayank Agarwal 33, Karun Nair 21, Manish Pandey 22, Manoj Bhandage 25; Ankit Rajpoot 1/32) beat Uttar Pradesh: 139/8 in 20 overs (Upendra Yadav 42, Akashdeep Nath 46; V Koushik 3/22, R Vinay Kumar 2/24, J Suchit 2/19, Prasidh Krishna 1/28) by 10 runs. 

LEAVE A REPLY

Please enter your comment!
Please enter your name here

two × 2 =