ಮುಷ್ತಾಕ್ ಅಲಿ ಟಿ20 ಸೂಪರ್ ಲೀಗ್: ಮುಂಬೈ ವಿರುದ್ಧ ಗೆಲ್ತಾರಾ ಕರ್ನಾಟಕ ಬಾಯ್ಸ್..?

0

ಇಂದೋರ್, ಮಾರ್ಚ್ 7: ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ಸೂಪರ್ ಲೀಗ್ ಹಂತದ ಪಂದ್ಯಗಳು ನಾಳೆ ಇಂದೋರ್ ನಲ್ಲಿ ಆರಂಭವಾಗಲಿದೆ.

ಹೋಳ್ಕರ್ ಕ್ರೀಡಾಂಗಣದಲ್ಲಿ ಸಂಜೆ 5.30ಕ್ಕೆ ಆರಂಭವಾಗಲಿರುವ ಹಗಲು-ರಾತ್ರಿ ಪಂದ್ಯದಲ್ಲಿ ಕರ್ನಾಟಕ ತಂಡ ಬಲಿಷ್ಠ ಮುಂಬೈ ತಂಡವನ್ನು ಎದುರಿಸಲಿದೆ. ಮನೀಶ್ ಪಾಂಡೆ ನಾಯಕತ್ವದ ಕರ್ನಾಟಕ ತಂಡ ಕಟಕ್ ನಲ್ಲಿ ನಡೆದ ಲೀಗ್ ಹಂತದ ಪಂದ್ಯಗಳಲ್ಲಿ ಎಲ್ಲಾ ಏಳು ಪಂದ್ಯಗಳನ್ನು ಗೆದ್ದು ಅಜೇಯವಾಗಿ ಸೂಪರ್ ಲೀಗ್ ಹಂತಕ್ಕೇರಿದೆ.

ಭಾರತ ಟೆಸ್ಟ್ ತಂಡದ ಉಪನಾಯಕ ಅಜಿಂಕ್ಯ ರಹಾನೆ ನಾಯಕತ್ವದ ಮುಂಬೈ ತಂಡದಲ್ಲಿ ಶ್ರೇಯಸ್ ಅಯ್ಯರ್, ಪೃಥ್ವಿ ಶಾ ಅವರಂತಹ ಅಪಾಯಕಾರಿ ಆಟಗಾರರಿದ್ದಾರೆ.

ಸೂಪರ್ ಲೀಗ್ ಹಂತದಲ್ಲಿ ಕರ್ನಾಟಕ ತಂಡ ‘ಬಿ’ ಗುಂಪಿನಲ್ಲಿ ಮುಂಬೈ, ಉತ್ತರ ಪ್ರದೇಶ, ದೆಹಲಿ ಮತ್ತು ವಿದರ್ಭ ತಂಡಗಳೊಂದಿಗೆ ಸ್ಥಾನ ಪಡೆದಿದೆ. ರೈಲ್ವೇಸ್, ಬಂಗಾಳ, ಮಹಾರಾಷ್ಟ್ರ ಮತ್ತು ಜಾರ್ಖಂಡ್ ತಂಡಗಳು ‘ಎ’ ಗುಂಪಿನಲ್ಲಿವೆ. ಸೂಪರ್ ಲೀಗ್ ಹಂತದ ಎಲ್ಲಾ ಪಂದ್ಯಗಳು ಇಂದೋರ್ ನಲ್ಲಿ ನಡೆಯಲಿವೆ. 

ಕಟಕ್ ನಲ್ಲಿ ನಡೆದ ಲೀಗ್ ಹಂತದ ಪಂದ್ಯಗಳಲ್ಲಿ ಕರ್ನಾಟಕ ಅಜೇಯ ಸಾಧನೆ ಮಾಡಿತ್ತು. ‘ಡಿ’ ಗುಂಪಿನಲ್ಲಿದ್ದ ಕರ್ನಾಟಕ ತಂಡ ಬಂಗಾಳ, ಛತ್ತೀಸ್ ಗಢ, ಅಸ್ಸಾಂ, ಹರ್ಯಾಣ, ಒಡಿಶಾ, ಅರುಣಾಚಲ ಪ್ರದೇಶ ಮತ್ತು ಮಿಜೋರಾಂ ವಿರುದ್ಧ ಗೆದ್ದು ಅಜೇಯವಾಗಿ ಸೂಪರ್ ಲೀಗ್ ಹಂತಕ್ಕೇರಿತ್ತು.

ಕರ್ನಾಟಕ ತಂಡ: ಮನೀಶ್ ಪಾಂಡೆ(ನಾಯಕ), ಕರುಣ್ ನಾಯರ್(ಉಪನಾಯಕ), ಮಯಾಂಕ್ ಅಗರ್ವಾಲ್, ರೋಹನ್ ಕದಂ, ಶರತ್ ಬಿ.ಆರ್(ವಿಕೆಟ್ ಕೀಪರ್), ಶ್ರೇಯಸ್ ಗೋಪಾಲ್, ಜೆ.ಸುಚಿತ್, ಆರ್.ವಿನಯ್ ಕುಮಾರ್, ಎಂ.ಪ್ರಸಿದ್ಧ್ ಕೃಷ್ಣ, ಅಭಿಮನ್ಯು ಮಿಥುನ್, ಕೆ.ಸಿ ಕಾರಿಯಪ್ಪ, ವಿ.ಕೌಶಿಕ್, ಮನೋಜ್ ಭಾಂಡಗೆ, ಲವನೀತ್ ಸಿಸೋಡಿಯಾ(ವಿಕೆಟ್ ಕೀಪರ್), ಕೋಚ್: ಯರೇಗೌಡ, ಬೌಲಿಂಗ್ ಕೋಚ್: ಎಸ್.ಅರವಿಂದ್, ಮ್ಯಾನೇಜರ್: ಅನುತೋಷ್ ಪಾಲ್, ಲಾಜಿಸ್ಟಿಕ್ ಮ್ಯಾನೇಜರ್: ಎ.ರಮೇಶ್ ರಾವ್.

ಮುಂಬೈ ತಂಡ: ಅಜಿಂಕ್ಯ ರಹಾನೆ(ನಾಯಕ), ಪೃಥ್ವಿ ಶಾ, ಶ್ರೇಯಸಿ ಅಯ್ಯರಿ, ಸೂರ್ಯಕುಮಾರ್ ಯಾದವ್, ಸಿದ್ದೇಶ್ ಲಾಡ್, ಧವಳ್ ಕುಲಕರ್ಣಿ, ತುಷಾರ್ ದೇಶಪಾಂಡೆ, ರಾಸ್ಟನ್ ಡಯಾಸ್, ಏಕನಾಥ್ ಕೆರ್ಕರ್, ಡಿಯು ಮುತ್ಕರ್, ಶಮ್ಸ್ ಮುಲಾನಿ, ಆಕಾಶ್ ಪಾರ್ಕರ್, ಶಾರ್ದೂಲ್ ಠಾಕೂರ್, ಶುಭಂ ರಂಜನೆ.

LEAVE A REPLY

Please enter your comment!
Please enter your name here

fifteen + one =