ಮುಷ್ತಾಕ್ ಅಲಿ ಟಿ20: ಕರ್ನಾಟಕಕ್ಕೆ ಸತತ 7ನೇ ಜಯ, ಇಲ್ಲಿದೆ ಸೂಪರ್ ಲೀಗ್ ವೇಳಾಪಟ್ಟಿ

0

ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಕರ್ನಾಟಕ ತಂಡ ‘ಡಿ’ ಗುಂಪಿನಲ್ಲಿ ಆಡಿದ ಎಲ್ಲಾ ಏಳು ಪಂದ್ಯಗಳನ್ನು ಗೆದ್ದು ಅಜೇಯವಾಗಿ ಸೂಪರ್ ಲೀಗ್ ಹಂತಕ್ಕೆ ಲಗ್ಗೆ ಇಟ್ಟಿದೆ.

ಕಟಕ್ ನ ಡ್ರೀಮ್ಸ್ ಮೈದಾನದಲ್ಲಿ ಶನಿವಾರ ನಡೆದ ಅಂತಿಮ ಲೀಗ್ ಪಂದ್ಯದಲ್ಲಿ ಕರ್ನಾಟಕ ತಂಡ ಹರ್ಯಾಣ ತಂಡವನ್ನು 14 ರನ್ ಗಳಿಂದ ಸೋಲಿಸಿತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕರ್ನಾಟಕ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 138 ರನ್ ಗಳ ಸಾಧಾರಣ ಮೊತ್ತ ಕಲೆ ಹಾಕಿತು.

ನಂತರ ಗುರಿ ಬೆನ್ನಟ್ಟಿದ ಹರ್ಯಾಣ 19.1 ಓವರ್ ಗಳಲ್ಲಿ 124 ರನ್ನಿಗೆ ಆಲೌಟಾಯಿತು. ಕರ್ನಾಟಕ ಪರ ಯುವ ವೇಗಿ ಪ್ರಸಿದ್ಧ್ ಕೃಷ್ಣ(3/25) ಮತ್ತು ಲೆಗ್ ಸ್ಪಿನ್ನರ್ ಶ್ರೇಯಸ್ ಗೋಪಾಲ್(2/16) ತಲಾ ಮೂರು ವಿಕೆಟ್ ಉರುಳಿಸಿದರು. ಮಾಜಿ ನಾಯಕ ವಿನಯ್ ಕುಮಾರ್, ವಿ.ಕೌಶಿಕ್, ಮನೋಜ್ ಭಾಂಡಗೆ ಮತ್ತು ಜೆ.ಸುಚಿತ್ ತಲಾ 1 ವಿಕೆಟ್ ಉರುಳಿಸಿದರು.

ಸೂಪರ್ ಲೀಗ್ ಹಂತದಲ್ಲಿ ಕರ್ನಾಟಕ ತಂಡ ‘ಬಿ’ ಗ್ರೂಪ್ ನಲ್ಲಿ ಮುಂಬೈ, ಉತ್ತರ ಪ್ರದೇಶ, ದೆಹಲಿ ಮತ್ತು ರಣಜಿ ಚಾಂಪಿಯನ್ಸ್ ವಿದರ್ಭ ತಂಡಗಳೊಂದಿಗೆ ಸ್ಥಾನ ಪಡೆದಿದೆ. ಸೂಪರ್ ಲೀಗ್ ಹಂತದ ತನ್ನ ಎಲ್ಲಾ ಪಂದ್ಯಗಳನ್ನು ಕರ್ನಾಟಕ ತಂಡ ಇಂದೋರ್ ನಲ್ಲಿ ಆಡಲಿದೆ.

Brief scores

Karnakata: 138/9 in 20 overs (Rohan Kadam 25, Manish Pandey 25, Mayank Agarwal 20; Amit Mishra 3/20) beat Haryana: 124 all out in 19.1 overs (Sumit Kumar 63; M Prasidh Krishna 3/25, Shreyas Gopal 3/16, V Koushik 1/24, R Vinay Kumar 1/26, Manoj Bhandage 1/14, J Suchit 1/18) by 14 runs.

ಸೂಪರ್ ಲೀಗ್: ಕರ್ನಾಟಕ ತಂಡದ ವೇಳಾಪಟ್ಟಿ

ಮಾರ್ಚ್ 8: ಕರ್ನಾಟಕ Vs ಮುಂಬೈ

ಮಾರ್ಚ್ 9: ಕರ್ನಾಟಕ Vs ಉತ್ತರ ಪ್ರದೇಶ

ಮಾರ್ಚ್ 10: ಕರ್ನಾಟಕ Vs ದೆಹಲಿ

ಮಾರ್ಚ್ 12: ಕರ್ನಾಟಕ Vs ವಿದರ್ಭ

LEAVE A REPLY

Please enter your comment!
Please enter your name here

four × 3 =