ಮುಷ್ತಾಕ್ ಅಲಿ ಟಿ20 ಸೂಪರ್ ಲೀಗ್: ಕರ್ನಾಟಕ ಭರ್ಜರಿ ಬೌಲಿಂಗ್, ಮುಂಬೈ 97/9

0

ಇಂದೋರ್, ಮಾರ್ಚ್ 8: ಕರ್ನಾಟಕದ ಬೌಲರ್ ಗಳ ಮಾರಕ ದಾಳಿಗೆ ತತ್ತರಿಸಿದ ಬಲಿಷ್ಠ ಮುಂಬೈ ತಂಡ, ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ಸೂಪರ್ ಲೀಗ್ ಪಂದ್ಯದಲ್ಲಿ 9 ವಿಕೆಟ್ ನಷ್ಟಕ್ಕೆ ಕೇವಲ 97 ರನ್ ಕಲೆ ಹಾಕಿದೆ.

ಹೋಳ್ಕರ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಮುಂಬೈ, ಮನೀಶ್ ಪಾಂಡೆ ಬಳಗದ ದಾಳಿಗೆ ತತ್ತರಿಸಿ 100ರ ಗಡಿ ದಾಟುವಲ್ಲಿ ವಿಫಲಗೊಂಡಿತು. ಜ್ಯೂನಿಯರ್ ಸಚಿನ್ ತೆಂಡೂಲ್ಕರ್ ಖ್ಯಾತಿಯ ಪೃಥ್ವಿ ಶಾ ಶೂನ್ಯಕ್ಕೆ ಮೊದಲ ಓವರ್ ನಲ್ಲೇ ದಾವಣಗೆರೆ ಎಕ್ಸ್ ಪ್ರೆಸ್ ಆರ್.ವಿನಯ್ ಕುಮಾರ್ ಅವರಿಗೆ ವಿಕೆಟ್ ಒಪ್ಪಿಸಿದರು.  ನಾಯಕ ಶ್ರೇಯಸ್ ಅಯ್ಯರ್ ಕೇವಲ 10 ರನ್ ಗಳಿಸಿ ಯುವ ಆಲ್ರೌಂಡರ್ ಮನೋಜ್ ಭಾಂಡಗೆಗೆ ವಿಕೆಟ್ ಒಪ್ಪಿಸಿದರು.

ಕರ್ನಾಟಕ ಪರ ಎಲ್ಲಾ ಬೌಲರ್ ಗಳು ವಿಕೆಟ್ ಪಡೆದದ್ದು ವಿಶೇಷ. ವಿನಯ್(2/15) ಮತ್ತು ಭಾಂಡಗೆ(2/11) ತಲಾ 2 ವಿಕೆಟ್ ಉರುಳಿಸಿದರೆ, ಪ್ರಸಿದ್ಧ್ ಕೃಷ್ಣ(1/26), ವಿ.ಕೌಶಿಕ್(1/17), ಜೆ.ಸುಚಿತ್(1/12) ಮತ್ತು ಕೆಸಿ ಕಾರಿಯಪ್ಪ(1/14) ತಲಾ ಒಂದು ವಿಕೆಟ್ ಪಡೆದರು. 

LEAVE A REPLY

Please enter your comment!
Please enter your name here

five × 4 =