ವಿಜಯ್ ಹಜಾರೆ ಫೈನಲ್ಸ್: ಹುಟ್ಟುಹಬ್ಬದಂದೇ ಮಿಥುನ್ ಹ್ಯಾಟ್ರಿಕ್ & 5 ವಿಕೆಟ್ಸ್

0

ಬೆಂಗಳೂರು, ಅಕ್ಟೋಬರ್ 26: 30ನೇ ಜನ್ಮದಿನದ ಸಂಭ್ರಮದಲ್ಲಿರುವ ಕರ್ನಾಟಕದ ವೇಗದ ಬೌಲರ್, ಪೀಣ್ಯ ಎಕ್ಸ್’ಪ್ರೆಸ್ ಖ್ಯಾತಿಯ ಅಭಿಮನ್ಯು ಮಿಥುನ್ ವಿಜಯ್ ಹಜಾರೆ ಟ್ರೋಫಿ ಫೈನಲ್ ಪಂದ್ಯದಲ್ಲಿ ತಮಿಳುನಾಡು ವಿರುದ್ಧ ಅಮೋಘ ಹ್ಯಾಟ್ರಿಕ್ ಹಾಗೂ 5 ವಿಕೆಟ್’ಗಳ ಸಾಧನೆ ಮಾಡಿದ್ದಾರೆ. ಆ ಮೂಲಕ ಹುಟ್ಟುಹಬ್ಬವನ್ನು ಸ್ಮರಣೀಯವಾಗಿಸಿಕೊಂಡಿದ್ದಾರೆ.
ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಫೈನಲ್ ಪಂದ್ಯದಲ್ಲಿ ಅಮೋಘ ಬೌಲಿಂಗ್ ಪ್ರದರ್ಶಿಸಿದ ಮಿಥುನ್ 9.5 ಓವರ್’ಗಳಲ್ಲಿ 34 ರನ್ನಿತ್ತು 5 ವಿಕೆಟ್ ಉರುಳಿಸಿದರು. ಇದು ಲಿಸ್ಟ್ ‘ಎ’ ಕ್ರಿಕೆಟ್’ನಲ್ಲಿ ಮಿಥುನ್ ಅವರ ಅತ್ಯುತ್ತಮ ಬೌಲಿಂಗ್ ಪ್ರದರ್ಶನವಾಗಿದೆ. 50ನೇ ಓವರ್’ನ 3, 4 ಹಾಗೂ 5ನೇ ಎಸೆತಗಳಲ್ಲಿ ಸತತ ಮೂರು ವಿಕೆಟ್ ಕಬಳಿಸಿದ ಮಿಥುನ್, ಫೈನಲ್ ಪಂದ್ಯದಲ್ಲೇ ಐತಿಹಾಸಿಕ ಸಾಧನೆ ಮಾಡಿದರು. ಇದು ಲಿಸ್ಟ್ ‘ಎ’ ಕ್ರಿಕೆಟ್’ನಲ್ಲಿ ಮಿಥುನ್ ಅವರ ಮೊದಲ ಹ್ಯಾಟ್ರಿಕ್. 2009-10ನೇ ಸಾಲಿನಲ್ಲಿ ರಣಜಿ ಟ್ರೋಫಿಗೆ ಪದಾರ್ಪಣೆ ಮಾಡಿದ್ದ ಮಿಥುನ್, ಉತ್ತರ ಪ್ರದೇಶ ವಿರುದ್ಧ ಮೀರತ್’ನಲ್ಲಿ ನಡೆದ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್’ಗಳ ಸಾಧನೆ ಮಾಡಿದ್ದರು.

LEAVE A REPLY

Please enter your comment!
Please enter your name here

nineteen − 19 =