ರಾಜ್ಯದ ರಣಜಿ ಹೀರೊ ವಿಜಯ್ ಕುಮಾರ್ ವಿಧಿವಶ

0

ಬೆಂಗಳೂರು, ಜೂನ್ 2: ಕರ್ನಾಟಕದ ರಣಜಿ ಹೀರೊ ವಿ.ಎಸ್ ವಿಜಯ್ ಕುಮಾರ್ ಶನಿವಾರ ವಿಧಿವಶರಾಗಿದ್ದಾರೆ.

ರಣಜಿ ಟ್ರೋಫಿ ವಿಜೇತ ಕರ್ನಾಟಕ ತಂಡದ ಸದಸ್ಯರಾಗಿದ್ದ ವಿಜಯ್ ಕುಮಾರ್ ತಮ್ಮ ಆಲ್ರೌಂಡ್ ಆಟದಿಂದ ಗಮನ ಸೆಳೆದಿದ್ದರು. 57 ಪ್ರಥಮದರ್ಜೆ ಪಂದ್ಯಗಳನ್ನಾಡಿರುವ ವಿಜಯ್ ಕುಮಾರ್ 16 ಅರ್ಧಶತಕ ಹಾಗೂ 2 ಶತಕಗಳ ನೆರವಿನಿಂದ 2891 ರನ್ ಗಳಿಸಿದ್ದಾರೆ. ಅಲ್ಲದೆ 46 ವಿಕೆಟ್ ಗಳನ್ನೂ ಪಡೆದಿದ್ದಾರೆ. ನಿವೃತ್ತಿಯ ನಂತರ ವಿಜಯ್ ಕುಮಾರ್ ಯಶಸ್ವಿ ಕ್ರೀಡಾ ಆಡಳಿತಗಾರರೂ ಆಗಿದ್ದರು.

ನೆಟ್ಸ್ ನಲ್ಲಿ ಪ್ಯಾಡ್ ಇಲ್ಲದೆ ವೇಗದ ಬೌಲರ್ ಗಳ ವಿರುದ್ಧ ಧೈರ್ಯವಾಗಿ ಆಡುತ್ತಿದ್ದ ವಿಜಯ್ ಕುಮಾರ್ ರಾಜ್ಯದ ಹಲವಾರು ಕ್ರಿಕೆಟಿಗರಿಗೆ ಸ್ಫೂರ್ತಿಯಾಗಿದ್ದರು.

LEAVE A REPLY

Please enter your comment!
Please enter your name here

three × 1 =