ಎಮರ್ಜಿಂಗ್ ಏಷ್ಯಾ ಕಪ್: ಭಾರತ ತಂಡಕ್ಕೆ ಕನ್ನಡಿಗ ಶರತ್ ನಾಯಕ

0
Sharath BR

ಬೆಂಗಳೂರು, ಸಪ್ಟೆಂಬರ್ 30: ಕರ್ನಾಟಕದ ಪ್ರತಿಭಾನ್ವಿತ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಬಿ.ಆರ್ ಶರತ್, ಎಮರ್ಜಿಂಗ್ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಗೆ ಪ್ರಕಟಿಸಲಾಗಿರುವ ಭಾರತ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ. ಭಾರತ ತಂಡದ ಮಾಜಿ ಸ್ಪಿನ್ನರ್ ಆಶಿಶ್ ಕಪೂರ್ ನೇತೃತ್ವದ ಬಿಸಿಸಿಐ ಕಿರಿಯರ ಆಯ್ಕೆ ಸಮಿತಿ, ಈ ತಂಡವನ್ನು ಪ್ರಕಟಿಸಿದ್ದು, ಟೂರ್ನಿ ನವೆಂಬರ್’ನಲ್ಲಿ ಬಾಂಗ್ಲಾದೇಶದಲ್ಲಿ ನಡೆಯಲಿದೆ.

23 ವರ್ಷದ ಬಲಗೈ ಬ್ಯಾಟ್ಸ್’ಮನ್ ಬಿ.ಆರ್ ಶರತ್ ರಣಜಿ ಪದಾರ್ಪಣೆಯ ಪಂದ್ಯದಲ್ಲೇ ಶತಕ ಬಾರಿಸಿದ ಸಾಧನೆ ಮಾಡಿದ್ದರು. ಕಳೆದ ವರ್ಷ ನಾಗ್ಪುರದಲ್ಲಿ ನಡೆದ ವಿದರ್ಭ ವಿರುದ್ಧದ ರಣಜಿ ಪಂದ್ಯದ ಮೂಲಕ ಪ್ರಥಮದರ್ಜೆ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದ ಶರತ್, ಆ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸಿದ್ದರು.

ಇತ್ತೀಚೆಗಷ್ಟೇ ಛತ್ತೀಸ್’ಗಢದ ರಾಯ್ಪುರದಲ್ಲಿ ಅಂತ್ಯಗೊಂಡ ಬಾಂಗ್ಲಾದೇಶ ವಿರುದ್ಧದ ಅಂಡರ್-23 ಏಕದಿನ ಸರಣಿಯಲ್ಲೂ ಶರತ್ 3 ಪಂದ್ಯಗಳಲ್ಲಿ ಒಂದು ಅರ್ಧಶತಕ ಸಹಿತ 116 ರನ್ ಗಳಿಸಿ ಮಿಂಚಿದ್ದರು.

ಎಮರ್ಜಿಂಗ್ ಏಷ್ಯಾ ಕಪ್ ಟೂರ್ನಿಗೆ ಭಾರತ ತಂಡ: ಬಿ.ಆರ್ ಶರತ್(ನಾಯಕ, ವಿಕೆಟ್ ಕೀಪರ್), ವಿನಾಯಕ್ ಗುಪ್ತಾ, ಆರ್ಯನ್ ಜುಯಾಲ್, ಚಿನ್ಮಯ್ ಸುತಾರ್, ಯಶ್ ರಾಥೋಡ್, ಅರ್ಮಾನ್ ಜಾಫರ್, ಸನ್ವೀರ್ ಸಿಂಗ್, ಕಮಲೇಶ್ ನಾಗರಕೋಟಿ, ಹೃತಿಕ್ ಶೋಕೀನ್, ಎಸ್.ಎ ದೇಸಾಯಿ, ಅರ್ಷದೀಪ್ ಸಿಂಗ್, ಎಸ್.ಆರ್ ದುಬೆ, ಕುಮಾರ್ ಸೂರಜ್, ಪಿ.ರೇಖಡೆ, ಕುಲ್ದೀಪ್ ಯಾದವ್.

LEAVE A REPLY

Please enter your comment!
Please enter your name here

3 × 1 =