ಟೀಮ್ ಇಂಡಿಯಾ ಬೌಲಿಂಗ್ ಕೋಚ್ ಹುದ್ದೆಗೆ ಕನ್ನಡಿಗ ಸುನಿಲ್ ಜೋಶಿ ಜೋಶಿ ಅರ್ಜಿ

0

ಬೆಂಗಳೂರು, ಆಗಸ್ಟ್ 07: ರ್ನಾಟಕದ ಸ್ಪಿನ್ ಮಾಂತ್ರಿಕ ಸುನಿಲ್ ಜೋಶಿ ಭಾರತ ಕ್ರಿಕೆಟ್ ತಂಡದ ಬೌಲಿಂಗ್ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ಐಸಿಸಿ ವಿಶ್ವಕಪ್ ಟೂರ್ನಿಯವರೆಗೆ ಸುನಿಲ್ ಜೋಶಿ ಬಾಂಗ್ಲಾದೇಶ ತಂಡದ ಸ್ಪಿನ್ ಬೌಲಿಂಗ್ ಕೋಚ್ ಆಗಿದ್ದರು. ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್ ನೇತೃತ್ವದ ಕ್ರಿಕೆಟ್ ಸಲಹಾ ಸಮಿತಿ ಭಾರತ ತಂಡದ ಸಹಾಯಕ ಸಿಬ್ಬಂದಿಯ ಆಯ್ಕೆ ಮಾಡಲಿದೆ. ಕರ್ನಾಟಕದ ದಿಗ್ಗಜ ಆಟಗಾರ್ತಿ ಶಾಂತಾ ರಂಗಸ್ವಾಮಿ ಮತ್ತು ಮಾಜಿ ಕ್ರಿಕೆಟಿಗ ಅನ್ಷುಮಾನ್ ಗಾಯಕ್ವಾಡ್ ಕ್ರಿಕೆಟ್ ಸಲಹಾ ಸಮಿತಿಯ ಸದಸ್ಯರಾಗಿದ್ದಾರೆ.

ಭಾರತ ತಂಡದ ಬೌಲಿಂಗ್ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದೇನೆ. ಬಾಂಗ್ಲಾದೇಶ ತಂಡದೊಂದಿಗೆ ಎರಡೂವರೆ ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದು, ಮುಂದಿನ ಸವಾಲಿಗೂ ಸಿದ್ಧ. ಭಾರತ ತಂಡಕ್ಕೆ ಪರಿಣತ ಸ್ಪಿನ್ ಬೌಲಿಂಗ್ ಕೋಚ್ ಇಲ್ಲ. ಹೀಗಾಗಿ ಬಿಸಿಸಿಐ ನನ್ನ ಅರ್ಜಿಯನ್ನು ಪುರಸ್ಕರಿಸಲಿದೆ ಎಂಬ ವಿಶ್ವಾಸವಿದೆ.

–       ಸುನಿಲ್ ಜೋಶಿ, ಮಾಜಿ ಕ್ರಿಕೆಟಿಗ

49 ವರ್ಷದ ಸುನಿಲ್ ಜೋಶಿ ಭಾರತ ಪರ 15 ಟೆಸ್ಟ್ ಹಾಗೂ 69 ಏಕದಿನ ಪಂದ್ಯಗಳನ್ನಾಡಿದ್ದಾರೆ. ಅಲ್ಲದೆ ದೇಶೀಯ ಕ್ರಿಕೆಟ್ನಲ್ಲಿ ಅಪಾರ ಅನುಭವ ಹೊಂದಿರುವ ಗದುಗಿನ ಜೋಶಿ, 160 ಪ್ರಥಮದರ್ಜೆ ಪಂದ್ಯಗಳನ್ನಾಡಿದ್ದು, 615 ವಿಕೆಟ್ ಹಾಗೂ 5129 ರನ್ ಗಳಿಸಿದ್ದಾರೆ. ಅಲ್ಲದೆ 162 ಲಿಸ್ಟ್ ಪಂದ್ಯಗಳಿಂದ 192 ವಿಕೆಟ್ಸ್ ಹಾಗೂ 1729 ರನ್ ಕಲೆ ಹಾಕಿದ್ದಾರೆ.

 

LEAVE A REPLY

Please enter your comment!
Please enter your name here

eighteen + 14 =