ಮತ್ತೆ ಬಂತು ಕೆಸಿಸಿ ಕ್ರಿಕೆಟ್.. ಈ ಬಾರಿ ಮೈಸೂರಿನಲ್ಲಿ ಕ್ರಿಕೆಟ್ ಕಲರವ

0

ಬೆಂಗಳೂರು, ಜುಲೈ 30: ಅಂತರಾಷ್ಟ್ರೀಯ ಕ್ರಿಕೆಟ್ ತಾರೆಗಳು, ಕನ್ನಡ ಚಲನಚಿತ್ರ ತಾರೆಗಳನ್ನೊಳಗೊಂಡ ಕಿಚ್ಚ ಸುದೀಪ್ ನೇತೃತ್ವದ ಕನ್ನಡ ಚಲನಚಿತ್ರ ಕಪ್ (ಕೆಸಿಸಿ) ಕ್ರಿಕೆಟ್ ಟೂರ್ನಿ ಮತ್ತೆ ಬಂದಿದೆ. 3ನೇ ಆವೃತ್ತಿಯ ಟೂರ್ನಿ ಸೆಪ್ಟೆಂಬರ್ 6, 7 ಮತ್ತು 8ರಂದು ಮೈಸೂರಿನಲ್ಲಿ ನಡೆಯಲಿದೆ.

ಮೊದಲ ಮತ್ತು 2ನೇ ಆವೃತ್ತಿಯ ಟೂರ್ನಿಗಳು ಬೆಂಗಳೂರಿನಲ್ಲಿ ನಡೆದಿದ್ದವು. ಆದರೆ ಈ ಬಾರಿ ಕೆಸಿಸಿ ಟೂರ್ನಿಯನ್ನು ಮೈಸೂರಿನಲ್ಲಿ ನಡೆಸಲು ನಿರ್ಧರಿಸಲಾಗಿದೆ. ಇತ್ತೀಚೆಗಷ್ಟೇ ಕಿಚ್ಚ ಸುದೀಪ್ ಅವರ ನೇತೃತ್ವದಲ್ಲಿ ನಡೆದ ಕೆಸಿಸಿ ಆಡಳಿತ ಮಂಡಳಿಯ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಕಳೆದೆರಡೂ ಟೂರ್ನಿಗಳಿಗಿಂತ ಈ ಬಾರಿಯ ಟೂರ್ನಿ ವಿಭಿನ್ನವಾಗಿರಲಿದ್ದು, ಟೂರ್ನಿಯಲ್ಲಿ ಭಾಗವಹಿಸಲಿರುವ ಆರು ತಂಡಗಳು ತಲಾ ಐದು ಲೀಗ್ ಪಂದ್ಯಗಳನ್ನಾಡಲಿವೆ.

ಕೆಸಿಸಿ ಟೂರ್ನಿಯಲ್ಲಿ ಗಂಗಾ ವಾರಿಯರ್ಸ್, ಒಡೆಯರ್ ಚಾರ್ಜರ್ಸ್, ವಿಜಯನಗರ ಪೇಟ್ರಿಯೆಟ್ಸ್, ಹೊಯ್ಸಳ ಈಗಲ್ಸ್, ಕದಂಬ ಲಯನ್ಸ್ ಮತ್ತು ರಾಷ್ಟ್ರಕೂಟ ಪ್ಯಾಂಥರ್ಸ್ ತಂಡಗಳು ಆಡಲಿವೆ. ಮೊದಲ ಆವೃತ್ತಿಯ ಟೂರ್ನಿಯಲ್ಲಿ ವಿಜಯನಗರ ಪೇಟ್ರಿಯೆಟ್ಸ್ ಹಾಗೂ 2ನೇ ಆವೃತ್ತಿಯ ಟೂರ್ನಿಯಲ್ಲಿ ಒಡೆಯರ್ ಚಾರ್ಜರ್ಸ್ ತಂಡಗಳು ಚಾಂಪಿಯನ್ ಆಗಿದ್ದವು. ಸ್ಯಾಂಡಲ್ವುಡ್ ನಟರಾದ ಕಿಚ್ಚ ಸುದೀಪ್, ಶಿವರಾಜ್ ಕುಮಾರ್, ಪುನೀತ್ ರಾಜ್ಕುಮಾರ್, ಯಶ್, ಗಣೇಶ್ ಮತ್ತು ಉಪೇಂದ್ರ ಕಳೆದ ಬಾರಿಯ ಟೂರ್ನಿಯಲ್ಲಿ ಆಡಿದ್ದರು. ಅಲ್ಲದೆ ಖ್ಯಾತ ಅಂತರಾಷ್ಟ್ರೀಯ ಕ್ರಿಕೆಟಿಗರಾದ ವೀರೇಂದ್ರ ಸೆಹ್ವಾಗ್, ಆ್ಯಡಂ ಗಿಲ್ಕ್ರಿಸ್ಟ್, ಹರ್ಷಲ್ ಗಿಬ್ಸ್, ತಿಲಕರತ್ನೆ ದಿಲ್ಷಾನ್, ಲ್ಯಾನ್ಸ್ ಕ್ಲೂಸ್ನೆರ್, ಓವೈಸ್ ಶಾ ಕೂಡ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here

15 − 12 =