ಅಮೆರಿಕದಲ್ಲಿ ಕರ್ನಾಟಕದ ಕೀರ್ತಿ ಪತಾಕೆ ಹಾರಿಸಿದ ಕೆಐಒಸಿ..!

0

ಬೆಂಗಳೂರು, ಏಪ್ರಿಲ್ 7: ಬೆಂಗಳೂರಿನ ಹಲಸೂರಿನಲ್ಲಿರುವ ಕರ್ನಾಟಕ ಇನ್ಸ್ ಟಿಟ್ಯೂಟ್ ಆಫ್ ಕ್ರಿಕೆಟ್(ಕೆಐಒಸಿ) ಭಾರತದ ಅತ್ಯಂತ ಸುಸಜ್ಜಿತ ಕ್ರಿಕೆಟ್ ಕ್ಲಬ್. ವಿಶ್ವದರ್ಜೆಯ ಅಭ್ಯಾಸ ಸೌಲಭ್ಯಗಳನ್ನು ಹೊಂದಿರುವ ಕೆಐಒಸಿಗೆ ಖ್ಯಾತ ಕ್ರಿಕೆಟಿಗರೇ ಅಭ್ಯಾಸಕ್ಕೆ ಆಗಮಿಸುತ್ತಾರೆ. ರಾಬಿನೇ ಉತ್ತಪ್ಪ, ಮಯಾಂಕ್ ಅಗರ್ವಾಲ್, ಶ್ರೇಯಸ್ ಗೋಪಾಲ್, ಮನೀಶ್ ಪಾಂಡೆ, ವೇದಾ ಕೃಷ್ಣಮೂರ್ತಿ, ವಿ.ಆರ್ ವನಿತಾ ಸಹಿತ ರಾಜ್ಯದ ಹಲವಾರು ಟಾಪ್ ಕ್ರಿಕೆಟರ್ ಗಳು ಇಲ್ಲಿ ಅಭ್ಯಾಸ ನಡೆಸುತ್ತಾರೆ.

ಅಭ್ಯಾಸಕ್ಕೆ ಆಸ್ಟ್ರೋಟರ್ಫ್ ವಿಕೆಟ್ಸ್, ಮಡ್ ವಿಕೆಟ್ಸ್ ಸೇರಿದಂತೆ ವಿವಿಧ ಪ್ರಕಾರದ ವಿಕೆಟ್ಸ್ ಗಳು ಇಲ್ಲಿವೆ. ಅಲ್ಲದೆ ಬೌಲಿಂಗ್ ಮಷಿನ್, ಇಂಡೋರ್ ವ್ಯವಸ್ಥೆಯೂ ಇದ್ದರು, ನೂರಾರು ಯುವ ಕ್ರಿಕೆಟಿಗರು ಕೆಐಒಸಿಯಲ್ಲಿ ಪ್ರತಿದಿನ ಅಭ್ಯಾಸ ನಡೆಸುತ್ತಾರೆ.

ಕರ್ನಾಟಕ ರಾಜೇಯ ಕ್ರಿಕೆಟ್ ಸಂಸ್ಥೆ(ಕೆ ಎಸ್ ಸಿ ಎ)ಯ ಮಾನ್ಯತೆ ಪಡೆದಿರುವ ಸ್ವಸ್ತಿಕ್ ಯೂನಿಯನ್, ಜವಾನ್ಸ್ ಕ್ರಿಕೆಟ್ ಕ್ಲಬ್ ಗಳ ಉಸ್ತುವಾರಿ ಹೊತ್ತಿರುವ ಇರ್ಫಾನ್ ಸೇಠ್ ಕೆಐಒಸಿಯ ರೂವಾರಿ. ಇದೀಗ ಕೆಐಒಸಿಯ ಕೀರ್ತಿ ದೂರದ ಅಮೆರಿಕಕ್ಕೂ ಹಬ್ಬಿದೆ. ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಕೆಐಒಸಿಯ ಅಂಗ ಸಂಸ್ಥೆ ಆರಂಭವಾಗಿದೆ.

LEAVE A REPLY

Please enter your comment!
Please enter your name here

17 − eight =