ಕನ್ನಡಿಗರಿಲ್ಲದೆ ಸೋಲುತ್ತಿದೆ RCB, ಪಂಜಾಬ್ ತಂಡದಲ್ಲಿ ಕನ್ನಡಿಗರೇ KINGS..!

0

ಮೊಹಾಲಿ, ಏಪ್ರಿಲ್ 8: ಐಪಿಎಲ್-12 ಟೂರ್ನಿಯಲ್ಲಿ ಸತತ 6 ಸೋಲು ಕಂಡಿರುಲ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಕನ್ನಡಿಗರೇ ಇಲ್ಲ. ಇರುವ ಒಬ್ಬ ಕನ್ನಡಿಗ ದೇವದತ್ ಪಡಿಕಲ್ ಗೆ ಆಡುವ ಅವಕಾಶವಿಲ್ಲ. ಆದ್ರೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಕನ್ನಡಿಗರೇ ಕಿಂಗ್ಸ್.

ಮೊಹಾಲಿಯಲ್ಲಿ ಸೋಮವಾರ ನಡೆದ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕನ್ನಡಿಗರಾದ ಕೆ.ಎಲ್ ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಆಕರ್ಷಕ ಅರ್ಧಶತಕ ಬಾರಿಸಿ ಪಂಜಾಬ್ ತಂಡಕ್ಕೆ ಜಯ ತಂದುಕೊಟ್ಟಿದ್ದಾರೆ.

151 ರನ್ ಚೇಸಿಂಗ್ ಸಂದರ್ಭದಲ್ಲಿ ರಾಹುಲ್ ಮತ್ತು ಮಯಾಂಕ್ 2ನೇ ವಿಕೆಟ್ ಗೆ 114 ರನ್ ಸೇರಿಸಿ ಗೆಲುವಿನ ರೂವಾರಿಗಳಾದರು. ಮಯಾಂಕ್ 43 ಎಸೆತಗಳಲ್ಲಿ 3 ಬೌಂಡರಿ ಮತ್ತು 3 ಸಿಕ್ಸರ್ಸ್ ನೆರವಿನೊಂದಿಗೆ 55 ರನ್ ಸಿಡಿಸಿದರೆ, ಜವಾಬ್ದಾರಿಯುತ ಆಟವಾಡಿ ಅಜೇಯರಾಗುಳಿದ ರಾಹುಲ್ 53 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ ಅಜೇಯ 71 ರನ್ ಗಳಿಸಿದರು. 

PC:KXIP

LEAVE A REPLY

Please enter your comment!
Please enter your name here

two × 3 =