ಕನ್ನಡಿಗನಿಗೆ ಕನ್ನಡಿಗನಿಂದ್ಲೇ ಇದೆಂಥಾ ಅನ್ಯಾಯ..? ರಾಹುಲ್ ಮೇಲೇಕೆ ಕುಂಬ್ಳೆಗೆ ಈ ಪರಿ ಕೋಪ..?

0

ಬೆಂಗಳೂರು, ಮಾರ್ಚ್ 16: ಐಸಿಸಿ ವಿಶ್ವಕಪ್ ಆರಂಭವಾಗಲು ಇನ್ನು ಉಳಿದಿರೋದು ಕೇವಲ ಒಂದೂವರೆ ತಿಂಗಳು ಮಾತ್ರ ಬಾಕಿ. ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ಟೀಮ್ ಇಂಡಿಯಾ ಆಟಗಾರರ ಮಧ್ಯೆ ಈಗಾಗ್ಲೇ ಪೈಪೋಟಿ ಆರಂಭವಾಗಿದೆ. ವಿಶ್ವಕಪ್ ನಲ್ಲಿ ಆಡಲಿರುವ ತಮ್ಮ ಆಯ್ಕೆಯ ಭಾರತ ತಂಡವನ್ನು ಕ್ರಿಕೆಟ್ ದಿಗ್ಗಜರು ಆಯ್ಕೆ ಮಾಡುತ್ತಿದ್ದಾರೆ.

ಕರ್ನಾಟಕದ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ತಮ್ಮ ಆಯ್ಕೆಯ ವಿಶ್ವಕಪ್ ತಂಡವನ್ನು ಆಯ್ಕೆ ಮಾಡಿದ್ದಾರೆ. ಅಚ್ಚರಿಯ ವಿಷಯ ಏನಂದ್ರೆ ಕನ್ನಡಿಗ ಕೆ.ಎಲ್ ರಾಹುಲ್ ಅವರಿಗೆ ತಮ್ಮ ವಿಶ್ವಕಪ್ ತಂಡದಲ್ಲಿ ಕುಂಬ್ಳೆ ಸ್ಥಾನ ನೀಡಿಲ್ಲ.

ಅನಿಲ್ ಕುಂಬ್ಳೆ ಅವರ ವಿಶ್ವಕಪ್ ತಂಡ: ವಿರಾಟ್ ಕೊಹ್ಲಿ(ನಾಯಕ), ಶಿಖರ್ ಧವನ್, ರೋಹಿತ್ ಶರ್ಮಾ, ಎಂ.ಎಸ್ ಧೋನಿ, ಕೇದಾರ್ ಜಾಧವ್, ಅಂಬಾಟಿ ರಾಯುಡು, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್, ಕುಲ್ದೀಪ್ ಯಾದವ್, ಯುಜ್ವೇಂದ್ರ ಚಹಾಲ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಖಲೀಲ್ ಅಹ್ಮದ್, ವಿಜಯ್ ಶಂಕರ್.

LEAVE A REPLY

Please enter your comment!
Please enter your name here

14 + eighteen =