ಕಿಂಗ್ಸ್ XI ಗುರು-ಶಿಷ್ಯರ 10 ವರ್ಷಗಳ ಹಿಂದಿನ ಫೋಟೊ ವೈರಲ್..!

0
ಬೆಂಗಳೂರು: ಐಪಿಎಲ್-13 ಟೂರ್ನಿಯಲ್ಲಿ. ಕಿಂಗ್ಸ್ ಇಲವೆನ್ ಪಂಜಾಬ್ ತಂಡದಲ್ಲಿ ಕನ್ನಡಿಗರದ್ದೇ ಹವಾ. ಕನ್ನಡಿಗ ಕೆ.ಎಲ್ ರಾಹುಲ್ ತಂಡದ ನಾಯಕರಾಗಿದ್ರೆ, ಸ್ಪಿನ್ ಲೆಜೆಂಡ್ ಅನಿಲ್ ಕುಂಬ್ಳೆ ತಂಡದ ಕೋಚ್ ಆಗಿದ್ದಾರೆ. ಕರ್ನಾಟಕದ ಸ್ಟಾರ್ ಆಟಗಾರರಾದ ಮಯಾಂಕ್ ಅಗರ್ವಾಲ್, ಕರುಣ್ ನಾಯರ್, ಕೆ.ಗೌತಮ್ ಮತ್ತು ಜೆ.ಸುಚಿತ್ ಕಿಂಗ್ಸ್ ಇಲವೆನ್ ತಂಡದಲ್ಲಿದ್ದಾರೆ.
ನಾಯಕ ರಾಹುಲ್ ಹಾಗೂ ಕೋಚ್ ಅನಿಲ್ ಕುಂಬ್ಳೆ 10 ವರ್ಷಗಳ ಹಿಂದೆ, ಅಂದ್ರೆ 2010ರಲ್ಲಿ ನಡೆದ KSCA ಕಾರ್ಯಕ್ರಮವೊಂದರಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದ ಫೋಟೊ ಈಗ ವೈರಲ್ ಆಗಿದೆ. ಆಗ ಕುಂಬ್ಳೆ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿದ್ರೆ, ರಾಹುಲ್ ಆಗಷ್ಟೇ ರಣಜಿ ಟ್ರೋಫಿಗೆ ಪದಾರ್ಪಣೆ ಮಾಡಿದ್ದರು.
https://twitter.com/doddaganesha/status/1303153399030935556
ಐಪಿಎಲ್ ಟೂರ್ನಿಯಲ್ಲಿ ಮೊದಲ ಬಾರಿ ನಾಯಕತ್ವ ವಹಿಸುತ್ತಿರುವ ರಾಹುಲ್ ಬಗ್ಗೆ ಕೋಚ್ ಕುಂಬ್ಳೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

LEAVE A REPLY

Please enter your comment!
Please enter your name here

18 − 15 =