ರಾಹುಲ್ ಹುಟ್ಟುಹಬ್ಬಕ್ಕೆ 500 ಜನರಿಗೆ ಊಟ ಹಾಕಿದ ಅಭಿಮಾನಿ..!

0
ರಾಹುಲ್ ಹುಟ್ಟುಹಬ್ಬವನ್ನು ಅವರ ದೊಡ್ಡ ಅಭಿಮಾನಿಯಾಗಿರುವ ಜೈ ಪಾಂಡ್ಯಾ

ಬೆಂಗಳೂರು, ಏಪ್ರಿಲ್ 18: ಭಾರತ ತಂಡದ ಸ್ಟಾರ್ ಆಟಗಾರ ಕೆ.ಎಲ್ ರಾಹುಲ್ ಅವರಿಗೆ ಜನ್ಮದಿನದ ಸಂಭ್ರಮ. ಸ್ಟಾರ್ ಓಪನರ್ ರಾಹುಲ್ ಶನಿವಾರ 29ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.

ರಾಹುಲ್ ಹುಟ್ಟುಹಬ್ಬವನ್ನು ಅವರ ದೊಡ್ಡ ಅಭಿಮಾನಿಯಾಗಿರುವ ಜೈ ಪಾಂಡ್ಯಾ ಎಂಬ ಯುವಕ ರಾಜ್’ಕೋಟ್’ನಲ್ಲಿ ವಿಭಿನ್ನವಾಗಿ ಆಚರಿಸಿದ್ದಾರೆ. ರಾಜ್’ಕೋಟ್’ನವರಾಗಿರುವ ಜೈ ಪಾಂಡ್ಯಾ, ರಾಹುಲ್ ಜನ್ಮದಿನದ ಹಿನ್ನೆಲೆಯಲ್ಲಿ 500 ಮಂದಿ ಬಡವರಿಗೆ ಅನ್ನದಾನದ ವ್ಯವಸ್ಥೆ ಮಾಡಿದ್ದಾರೆ.

ಭಾರತ ಪರ 36 ಟೆಸ್ಟ್ ಪಂದ್ಯಗಳನ್ನಾಡಿರುವ ರಾಹುಲ್ 5 ಶತಕ ಹಾಗೂ 11 ಅರ್ಧಶತಕಗಳ ಸಹಿತ 2006 ರನ್ ಗಳಿಸಿದ್ದಾರೆ. 32 ಏಕದಿನ ಪಂದ್ಯಗಳಿಂದ 4 ಶತಕ ಹಾಗೂ 7 ಅರ್ಧಶತಗಳ ಸಹಿತ 1239 ರನ್ ಹಾಗೂ 42 ಟಿ20 ಅಂತರಾಷ್ಟ್ರೀಯ ಪಂದ್ಯಗಳಿಂದ 2 ಶತಕ ಹಾಗೂ 11 ಅರ್ಧಶತಕಗಳ ನೆರವಿನಿಂದ 1461 ರನ್ ಗಳಿಸಿದ್ದಾರೆ. ಏಕದಿನ ಕ್ರಿಕೆಟ್ ಪದಾರ್ಪಣೆಯ ಪಂದ್ಯದಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ ಎಂಬ ದಾಖಲೆ ರಾಹುಲ್ ಅವರ ಹೆಸರಿನಲ್ಲಿದೆ. ಅಷ್ಟೇ ಅಲ್ಲದೆ, ಟೆಸ್ಟ್, ಏಕದಿನ ಹಾಗೂ ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಶತಕ ಬಾರಿಸಿದ ಅಪರೂಪದ ದಾಖಲೆ ಹೊಂದಿದ್ದಾರೆ.

LEAVE A REPLY

Please enter your comment!
Please enter your name here

twenty − 14 =