ವಿಶ್ವಕಪ್’ನಲ್ಲಿ ಚೊಚ್ಚಲ ಶತಕ ಸಿಡಿಸಿದ ಕನ್ನಡಿಗ ರಾಹುಲ್

0

ಲೀಡ್ಸ್, ಜುಲೈ 6: ಕನ್ನಡಿಗ ಕೆ.ಎಲ್ ರಾಹುಲ್ ಐಸಿಸಿ ವಿಶ್ವಕಪ್’ನಲ್ಲಿ ಚೊಚ್ಚಲ ಶತಕ ದಾಖಲಿಸಿದ್ದಾರೆ. ಶ್ರೀಲಂಕಾ ವಿರುದ್ಧ ಲೀಡ್ಸ್’ನ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಲೀಗ್ ಪಂದ್ಯದಲ್ಲಿ ಅಬ್ಬರಿಸಿದ ರಾಹುಲ್ 109 ಎಸೆತಗಳಲ್ಲಿ ತಮ್ಮ ಚೊಚ್ಚಲ ವಿಶ್ವಕಪ್ ಶತಕ ಬಾರಿಸಿದರು. ಅಂತಿಮವಾಗಿ 118 ಎಸೆತಗಳನ್ನೆದುರಿಸಿದ ರಾಹುಲ್ 11 ಬೌಂಡರಿಗಳು ಮತ್ತು 1 ಸಿಕ್ಸರ್ ನೆರವಿನಿಂದ 111 ರನ್ ಗಳಿಸಿ ಔಟಾದರು.

PC: BCCI

ಇದು ಏಕದಿನ ವೃತ್ತಿಜೀವನದಲ್ಲಿ ರಾಹುಲ್ ಗಳಿಸಿದ 2ನೇ ಶತಕ. ಜಿಂಬಾಬ್ವೆ ವಿರುದ್ಥದ ತಮ್ಮ ಪದಾರ್ಪಣೆಯ ಪಂದ್ಯದಲ್ಲೇ ರಾಹುಲ್ ಶತಕ ಗಳಿಸಿದ್ದರು. ಬ್ಯಾಟಿಂಗ್ ದಿಗ್ಗಜ ರಾಹುಲ್ ದ್ರಾವಿಡ್ ಅವರ ನಂತರ ವಿಶ್ವಕಪ್’ನಲ್ಲಿ ಶತಕ ಬಾರಿಸಿದ ಕರ್ನಾಟಕದ ಮೊದಲ ಬ್ಯಾಟ್ಸ್’ಮನ್ ಎಂಬ ಹಿರಿಮೆಗೆ ರಾಹುಲ್ ಪಾತ್ರರಾಗಿದ್ದಾರೆ.

LEAVE A REPLY

Please enter your comment!
Please enter your name here

eleven − 7 =