ಕೆ.ಎಲ್ ರಾಹುಲ್ 3000 ರನ್ ಸರದಾರ..!

0

ಬೆಂಗಳೂರು, ಏಪ್ರಿಲ್ 24: ಕರ್ನಾಟಕದ ಸ್ಟೈಲಿಷ್ ಬ್ಯಾಟ್ಸ್ ಮನ್ ಕೆ.ಎಲ್ ರಾಹುಲ್ ಟಿ20 ವೃತ್ತಿಜೀವನದಲ್ಲಿ 3000 ರನ್ ಪೂರ್ತಿಗೊಳಿಸಿದ್ದಾರೆ. ವಿಶೇಷ ಎಂದರೆ ತವರು ನೆಲ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಹುಲ್ ಈ ಸಾಧನೆ ಮಾಡಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ 13 ರನ್ ಗಳಿಸಿದ್ದಾಗ ರಾಹುಲ್ ಟಿ20 ಕ್ರಿಕೆಟ್ ನಲ್ಲಿ 3 ಸಾವಿರ ರನ್ ಗಳ ಸರದಾರನಾದರು. ಇದರಲ್ಲಿ ಅಂತರಾಷ್ಟ್ರೀಯ ಟಿ20ಯಲ್ಲಿ 27 ಪಂದ್ಯಗಳನ್ನಾಡಿರುವ ರಾಹುಲ್ 43.95ರ ಸರಾಸರಿಯಲ್ಲಿ 2 ಶತಕ ಮತ್ತು 5 ಅರ್ಧಶತಕಗಳ ನೆರವಿನಿಂದ 879 ರನ್ ಗಳಿಸಿದ್ದಾರೆ.

ತಮ್ಮ 105ನೇ ಪಂದ್ಯದಲ್ಲಿ 3 ಸಾವಿರ ರನ್ ಪೂರ್ತಿಗೊಳಿಸಿದ ರಾಹುಲ್ ಟಿ20 ವೃತ್ತಿಜೀವನದಲ್ಲಿ 3 ಶತಕ ಮತ್ತು 22 ಅರ್ಧಶತಕ ಸಿಡಿಸಿದ್ದಾರೆ. 2 ಶತಕಗಳನ್ನು ಅಂತರಾಷ್ಟ್ರೀಯ ಟಿ20ಯಲ್ಲಿ ಬಾರಿಸಿರುವ ರಾಹುಲ್ ಐಪಿಎಲ್ ನಲ್ಲಿ ಒಂದು ಶತಕ ಸಿಡಿಸಿದ್ದಾರೆ.

LEAVE A REPLY

Please enter your comment!
Please enter your name here

seven + 10 =