ಮಂಗಳೂರಿನಲ್ಲಿ ಸಿಮೆಂಟ್ ಕ್ರಿಕೆಟ್ ಪಿಚ್ ಗುಡಿಸುತ್ತಿದ್ದ ಕೆ.ಎಲ್ ರಾಹುಲ್..!

0
PC: KXIP/Twitter

ಬೆಂಗಳೂರು, ಮಾರ್ಚ್ 19: ಭಾರತ ತಂಡದ ಸ್ಟೈಲಿಷ್ ಆರಂಭಿಕ ಬ್ಯಾಟ್ಸ್ ಮನ್ ಕೆ.ಎಲ್ ರಾಹುಲ್ ಈಗ ಕ್ರಿಕೆಟ್ ಜಗತ್ತಿನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಭಾರತ ಪರ 34 ಟೆಸ್ಟ್, 14 ಏಕದಿನ ಹಾಗೂ 27 ಟಿ20 ಪಂದ್ಯಗಳನ್ನಾಡಿರುವ ರಾಹುಲ್ ಟೀಮ್ ಇಂಡಿಯಾದ ಭವಿಷ್ಯದ ತಾರೆ ಎಂಬುದರಲ್ಲಿ ಅನುಮಾನವಿಲ್ಲ.

ಭಾರತ ತಂಡಕ್ಕೆ ಆಯ್ಕೆಯಾಗುವ ಹಾದಿಯಲ್ಲಿ ರಾಹುಲ್ ಸಾಕಷ್ಟು ಪರಿಶ್ರಮ ಪಟ್ಟಿದ್ದಾರೆ. ಮಂಗಳೂರಿನಿಂದ ಆರಂಭವಾದ ಅವರ ಕ್ರಿಕೆಟ್ ಪಯಣ ಇದೀಗ ಭಾರತ ತಂಡದವರೆಗೆ ಅವರನ್ನು ತಂದು ನಿಲ್ಲಿಸಿದೆ.

ಮಂಗಳೂರಿನಲ್ಲಿ ಕ್ರಿಕೆಟ್ ಆಡುತ್ತಿದ್ದಾಗ ತಾವು ಪಟ್ಟ ಪರಿಶ್ರಮದ ಬಗ್ಗೆ ರಾಹುಲ್ ಮಾತನಾಡಿದ್ದಾರೆ. ಬೆಂಗಳೂರಿನಲ್ಲಿ ನಡದ ‘ಬೆಂಗಳೂರು ಯುನೈಟೆಡ ಕ್ರಿಕೆಟ್ ಕ್ಲಬ್’ನ 100ನೇ ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್, ”ನಾನು ಮಂಗಳೂರಿನಲ್ಲಿ ಕ್ರಿಕೆಟ್ ಆರಂಭಿಸಿದೆ ಮತ್ತು ಸಾಕಷ್ಟು ರನ್ ಕೂಡ ಗಳಿಸಿದ್ದೆ. ಬ್ಯಾಟಿಂಗ್ ಆರಂಭಿಸುವ ಮೊದಲ ಟ್ರೈನಿಂಗ್ ಸಂದರ್ಭದಲ್ಲಿ ನಾನು ಸಿಮೆಂಟ್ ಪಿಚ್ ಅನ್ನು ಗುಡಿಸಿ ಪಿಚ್ ಮೇಲೆ ಮ್ಯಾಟ್ ಹಾಕುತ್ತಿದ್ದೆ. ಈಗಿನ ಆಟಗಾರರಿಂದ ಅದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಯಾಕಂದ್ರೆ ಸೌಲಭ್ಯಗಳು ತುಂಬಾ ಸುಧಾರಣೆಗೊಂಡಿದ್ದು, ಆಟಗಾರರು ಆಟದತ್ತ ಮಾತ್ರ ಗಮನ ಹರಿಸುತ್ತಿದ್ದಾರೆ ಮತ್ತು ಅದು ತಪ್ಪಲ್ಲ” ಎಂದಿದ್ದಾರೆ.

ಭಾರತ ತಂಡದ ಮಾಜಿ ನಾಯಕ ಹಾಗೂ ‘ದಿ ಗ್ರೇಟ್ ವಾಲ್ ಆಫ್ ಇಂಡಿಯಾ’ ಖ್ಯಾತಿಯ ರಾಹುಲ್ ದ್ರಾವಿಡ್ ಬೆಂಗಳೂರು ಯುನೈಟೆಡ್ ಕ್ರಿಕೆಟ್ ಕ್ಲಬ್ ನ ಅಧ್ಯಕ್ಷರಾಗಿದ್ದಾರೆ. 26 ವರ್ಷದ ಕೆ.ಎಲ್ ರಾಹುಲ್ ಬಿಯುಸಿಸಿ ಕ್ರಿಕೆಟ್ ಕ್ಲಬ್ ನ ಆಟಗಾರನಾಗಿದ್ದಾರೆ.

LEAVE A REPLY

Please enter your comment!
Please enter your name here

1 × one =