64 ಎಸೆತ… 100* ರನ್… 6 ಬೌಂಡರಿ… 6 ಸಿಕ್ಸರ್.. ಇದು ರಾಹುಲ್ ಧಮಾಕ..!

0
PC: IPL/Twitter

ಮುಂಬೈ, ಏಪ್ರಿಲ್ 10: ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡುತ್ತಿರುವ ಕನ್ನಡಿಗ ಕೆ.ಎಲ್ ರಾಹುಲ್ ಐಪಿಎಲ್ ಟೂರ್ನಿಯಲ್ಲಿ ತಮ್ಮ ಚೊಚ್ಚಲ ಶತಕ ಸಿಡಿಸಿದ್ದಾರೆ. ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಅಬ್ಬರಿಸಿದ ರಾಹುಲ್ ಕೇವಲ 63 ಎಸೆತಗಳಲ್ಲಿ ಐಪಿಎಲ್ ನಲ್ಲಿ ಚೊಚ್ಚಲ ಶತಕ ಪೂರ್ತಿಗೊಳಿಸಿದರು.

ರಾಹುಲ್ ಅವರ ಶತಕದ ಇನ್ನಿಂಗ್ಸ್ ನಲ್ಲಿ 6 ಬೌಂಡರಿಗಳು ಮತ್ತು 6 ಸಿಕ್ಸರ್ಸ್ ಒಳಗೊಂಡಿದ್ದವು. ಹಾರ್ದಿಕ್ ಪಾಂಡ್ಯ ಎಸೆದ ಇನ್ನಿಂಗ್ಸ್ ನ 19ನೇ ಓವರ್ ನಲ್ಲಿ 3 ಸಿಕ್ಸರ್ಸ್ ಸಹಿತ 22 ರನ್ ದೋಚಿದ ರಾಹುಲ್, ಭರ್ಜರಿ ಶತಕ ಸಿಡಿಸಿದರು. ಐಪಿಎಲ್ ನಲ್ಲ್ಲಿ ಶತಕ ಬಾರಿಸಿದ ಕರ್ನಾಟಕದ 2ನೇ ಆಟಗಾರನೆಂಬ ಹಿರಿಮೆಗೆ ರಾಹುಲ್ ಪಾತ್ರರಾಗಿದ್ದಾರೆ.

2009ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಐಪಿಎಲ್-2 ಟೂರ್ನಿಯಲ್ಲಿ ಮನೀಶ್ ಪಾಂಡೆ ರಾಯಲ್ ಚಾಲೆಂಜರ್ಸ್ ಪರ ಭರ್ಜರಿ ಶತಕ ಸಿಡಿಸಿದ್ದರು.

LEAVE A REPLY

Please enter your comment!
Please enter your name here

two + 19 =