ಟೀಮ್ ಇಂಡಿಯಾಗೆ ರಾಹುಲ್ ಗ್ರೇಟ್ ಕಂಬ್ಯಾಕ್… ವಿಶ್ವಕಪ್ ತಂಡದಲ್ಲಿ ಸ್ಥಾನ ಪಕ್ಕಾ..!

0
PC: Cricket Australia

ಕಾಫಿ ವಿಥ್ ಕರಣ್ ಕಾರ್ಯಕ್ರಮದ ವಿವಾದದ ನಂತರ ಭಾರತ ತಂಡದಿಂದ ಹೊರ ಬಿದ್ದಿದ್ದ ಕನ್ನಡಿಗ ಕೆ.ಎಲ್ ರಾಹುಲ್ ಟೀಮ್ ಇಂಡಿಯಾಗೆ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ.

ವಿಶಾಖಪಟ್ಟಣದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಟಿ20 ಪಂದ್ಯದಲ್ಲಿ ರಾಹುಲ್ ಸ್ಫೋಟಕ ಅರ್ಧಶತಕ ಬಾರಿಸಿ ತಮ್ಮ ಪುನರಾಗಮನವನ್ನು ಸಾರಿದ್ದಾರೆ. ರೋಹಿತ್ ಶರ್ಮಾ ಜೊತೆ ಇನ್ನಿಂಗ್ಸ್ ಆರಂಭಿಸಿದ ರಾಹುಲ್ 36 ಎಸೆತಗಳಲ್ಲಿ 6 ಬೌಂಡರಿಗಳು ಮತ್ತು 1 ಭರ್ಜರಿ ಸಿಕ್ಸರ್ ನೆರವಿನಿಂದ 50 ರನ್ ಗಳಿಸಿ ಔಟಾದರು. ಇದು ಟಿ20 ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ರಾಹುಲ್ ಗಳಿಸಿದ 5ನೇ ಅರ್ಧಶತಕವಾಗಿದೆ.

PC: BCCI

ಆಸ್ಟ್ರೇಲಿಯಾ ವಿರುದ್ಧದ ಸರಣಿ ರಾಹುಲ್ ಅವರಿಗೆ ಮಹತ್ವದ್ದಾಗಿದೆ. ಈ ಸರಣಿಯಲ್ಲಿ ಉತ್ತಮ ಪ್ರದರ್ಶನವನ್ನು ಮುಂದುವರಿಸಿದರೆ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಆಡಲಿರುವ ಭಾರತ ತಂಡದಲ್ಲಿ ರಾಹುಲ್ 3ನೇ ಓಪನರ್ ಆಗಿ ಸ್ಥಾನ ಪಡೆಯಲಿದ್ದಾರೆ.

ಕಾಫಿ ವಿಥ್ ಕರಣ್ ಕಾರ್ಯಕ್ರಮದ ವಿವಾದದ ಹಿನ್ನೆಲೆಯಲ್ಲಿ ಕೆ.ಎಲ್ ರಾಹುಲ್ ಮತ್ತು ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಬಿಸಿಸಿಐನಿಂದ ಅಮಾನತಿನ ಶಿಕ್ಷೆಗೆ ಗುರಿಯಾಗಿದ್ದರು. ಹೀಗಾಗಿ ಕಳೆದ ಆಸ್ಟ್ರೇಲಿಯಾ ಪ್ರವಾಸದಿಂದ ಇಬ್ಬರು ತವರಿಗೆ ಮರಳಿದ್ದರು. ಅಮಾನತು ಶಿಕ್ಷೆ ವಾಪಸ್ ಪಡೆದ ನಂತರ ರಾಹುಲ್ ಭಾರತ ‘ಎ’ ಪರ ಆಡಿ ಫಾರ್ಮ್ ಕಂಡುಕೊಂಡಿದ್ದರು. ಅಲ್ಲದೆ ಭಾರತ ‘ಎ’ ತಂಡದ ಕೋಚ್ ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನವೂ ರಾಹುಲ್ ಗೆ ಸಿಕ್ಕಿತ್ತು. ಅತ್ಯಂತ ಅವಶ್ಯಕವಾಗಿದ್ದ ಸಂದರ್ಭದಲ್ಲಿ ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನ ರಾಹುಲ್ ಅವರಿಗೆ ಸಿಕ್ಕಿದ್ದು ಈಗ ಫಲಕೊಟ್ಟಿದೆ.

LEAVE A REPLY

Please enter your comment!
Please enter your name here

12 − 10 =