ಸ್ಮಿತ್’ರನ್ನು ಮೋಸಗಾರ ಎಂದ ಪ್ರೇಕ್ಷಕರಿಗೆ ಕೊಹ್ಲಿ ಮಾಡಿದ್ದೇನು ಗೊತ್ತಾ..?

0

ಲಂಡನ್, ಜೂನ್ 9: ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಸತತ 2ನೇ ಗೆಲುವು ದಾಖಲಿಸಿದೆ. ಲಂಡನ್ ನ ಓವಲ್ ಮೈದಾನದಲ್ಲಿ ನಡೆದ ತನ್ನ 2ನೇ ಪಂದ್ಯದಲ್ಲಿ ಟೀಮ್ ಇಂಡಿಯಾ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು ಬಗ್ಗು ಬಡಿಯಿತು.

ಈ ಪಂದ್ಯ ವಿಶೇಷ ಸನ್ನಿವೇಶವೊಂದಕ್ಕೆ ಸಾಕ್ಷಿಯಾಯಿತು. ಬಾಲ್ ಟ್ಯಾಂಪರಿಂಗ್ ವಿವಾದದ ನಂತರ ಒಂದು ವರ್ಷ ನಿಷೇಧ ಶಿಕ್ಷೆ ಮುಗಿಸಿ ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಾಪಸ್ಸಾಗಿರುವ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಸ್ಟೀವನ್ ಸ್ಮಿತ್ ಬೌಂಡರಿ ಗೆರೆಯ ಬಳಿ ಫೀಲ್ಡಿಂಗ್ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಭಾರತ ತಂಡವನ್ನು ಬೆಂಬಲಿಸುತ್ತಿದ್ದ ಪ್ರೇಕ್ಷಕರು ಸ್ಮಿತ್ ಅವರನ್ನು ‘ಚೀಟರ್(ಮೋಸಗಾರ)’ ‘ಚೀಟರ್’ ಎಂದು ಹೀಯಾಳಿಸಿದರು.

ಬ್ಯಾಟಿಂಗ್ ನಡೆಸುತ್ತಿದ್ದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪ್ರೇಕ್ಷಕರ ವರ್ತನೆಯಿಂದ ಸಿಡಿಮಿಡಿಗೊಂಡರು. ಅಷ್ಟೇ ಇಲ್ಲದೆ ಸ್ಮಿತ್ ಅವರನ್ನು ಹೀಯಾಳಿಸಬೇಡಿ, ಚಪ್ಪಾಳೆ ಮೂಲಕ ಬೆಂಬಲಿಸಿ ಎಂದು ಕ್ರೀಸ್ ನಿಂದಲೇ ಮನವಿ ಮಾಡಿದರು. ಕೊಹ್ಲಿ ಮನವಿಗೆ ಸ್ಪಂದಿಸಿದ ಪ್ರೇಕ್ಷಕರು ನಂತರ ಸ್ಮಿತ್ ಅವರನ್ನು ಹೀಯಾಳಿಸದೆ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು. ಕೊಹ್ಲಿ ಅವರ ಈ ನಡವಳಿಕೆ ಮೆಚ್ಚುಗೆಗೆ ಪಾತ್ರವಾಗಿದೆ.

LEAVE A REPLY

Please enter your comment!
Please enter your name here

nineteen + eleven =