ಪದಾರ್ಪಣೆಯ ಪಂದ್ಯದಲ್ಲೇ ಬೆಂಗಳೂರು ಎಕ್ಸ್‌ಪ್ರೆಸ್ ಕೌಶಿಕ್ ಕಮಾಲ್..!

0

ರಾಜ್ಯದ ಪ್ರತಿಭಾವಂತ ಬಲಗೈ ವೇಗದ ಬೌಲರ್ ವಿ.ಕೌಶಿಕ್ ಕರ್ನಾಟಕ ತಂಡಕ್ಕೆ ಭರ್ಜರಿ ಪದಾರ್ಪಣೆ ಮಾಡಿದ್ದಾರೆ. ಕಟಕ್ ನಲ್ಲಿ ನಡೆಯುತ್ತಿರುವ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ಅರುಣಾಚಲ ಪ್ರದೇಶ ವಿರುದ್ಧದ ಪಂದ್ಯದ ಮೂಲಕ ಕರ್ನಾಟಕ ಪರ ಕೌಶಿಕ್ ಮೊದಲ ಪಂದ್ಯವಾಡಿದರು.

ಪದಾರ್ಪಣೆಯ ಪಂದ್ಯದಲ್ಲೇ ಮಿಂಚಿದ ಯುವ ವೇಗಿ ಕೌಶಿಕ್ ಎರಡು ಓವರ್ ಗಳಲ್ಲಿ 13 ರನ್ನಿತ್ತು 2 ವಿಕೆಟ್ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ. ಕರ್ನಾಟಕ ರಣಜಿ ತಂಡದ ಮಾಜಿ ನಾಯಕ ಹಾಗೂ ಹಾಲಿ ಆಯ್ಕೆ ಸಮಿತಿಯ ಸದಸ್ಯ ಸಿ.ರಘು ಪಂದ್ಯಕ್ಕೂ ಮೊದಲು ಕೌಶಿಕ್ ಅವರಿಗೆ ಕರ್ನಾಟಕ ಕ್ಯಾಪ್ ನೀಡಿದರು.

26 ವರ್ಷದ ನೀಳಕಾಯದ ಕೌಶಿಕ್ ಕಳೆದ ಬಾರಿಯ ಕೆಪಿಎಲ್ ಟೂರ್ನಿಯಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ಪರ ಅಮೋಘ ಬೌಲಿಂಗ್ ಪ್ರದರ್ಶನ ತೋರಿದ್ದರು.


ವಿ.ಕೌಶಿಕ್ ಅವರಿಗೆ ಕರ್ನಾಟಕ ಕ್ಯಾಪ್ ತೊಡಿಸುತ್ತಿರುವ ಸಿ.ರಘು

LEAVE A REPLY

Please enter your comment!
Please enter your name here

2 + four =