ಕೆಪಿಎಲ್-8 ಡೇಟ್ ಫಿಕ್ಸ್.. ಕರುನಾಡ ಕ್ರಿಕೆಟ್ ಹಬ್ಬಕ್ಕೆ ಕೌಂಟ್ ಡೌನ್

0

ಬೆಂಗಳೂರು, ಜುಲೈ 17: ಕರುನಾಡ ಕ್ರಿಕೆಟ್ ಹಬ್ಬ ಎಂದೇ ಕರೆಯಲ್ಪಡುವ ಕರ್ನಾಟಕ ಪ್ರೀಮಿಯರ್ ಲೀಗ್ನ 8ನೇ ಆವೃತ್ತಿಯ ಟೂರ್ನಿಗೆ ದಿನಗಣನೆ ಆರಂಭವಾಗಿದೆ. ಕೆಪಿಎಲ್-8 ಟೂರ್ನಿ ಆಗಸ್ಟ್ 15ರಿಂದ ಆರಂಭವಾಗಲಿದೆ ಎಂದು ರಾಜ್ಯ ಕ್ರಿಕೆಟ್ ಸಂಸ್ಥೆಯ ಮೂಲಗಳು ತಿಳಿಸಿವೆ. ಜುಲೈ 29ರಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ.

ಈ ಬಾರಿಯ ಟೂರ್ನಿಯ ಪಂದ್ಯಗಳು ಬೆಂಗಳೂರು, ಮೈಸೂರು ಮತ್ತು ಶಿವಮೊಗ್ಗದಲ್ಲಿ ನಡೆಯುವ ಸಾಧ್ಯತೆಯಿದೆ. 2009ರಲ್ಲಿ ಆರಂಭವಾಗಿದ್ದ ಕೆಪಿಎಲ್ ಟೂರ್ನಿಯಲ್ಲಿ ಬಿಜಾಪುರ ಬುಲ್ಸ್ ತಂಡ ಹಾಲಿ ಚಾಂಪಿಯನ್ ಆಗಿದೆ.

ಕೆಪಿಎಲ್ ಚಾಂಪಿಯನ್ಸ್

2009: ಪ್ರಾವಿಡೆಂಟ್ ಬೆಂಗಳೂರು, ರನ್ನರ್ಸ್ ಅಪ್: ಬೆಳಗಾವಿ ಪ್ಯಾಂಥರ್ಸ್

2010: ಮಂಗಳೂರು ಯುನೈಟೆಡ್, ರನ್ನರ್ಸ್ ಅಪ್: ಪ್ರಾವಿಡೆಂಟ್ ಬೆಂಗಳೂರು

2014: ಮೈಸೂರು ವಾರಿಯರ್ಸ್, ರನ್ನರ್ಸ್ ಅಪ್: ಬೆಳಗಾವಿ ಪ್ಯಾಂಥರ್ಸ್

2015: ಬಿಜಾಪುರ ಬುಲ್ಸ್, ರನ್ನರ್ಸ್ ಅಪ್: ಹುಬ್ಬಳ್ಳಿ ಟೈಗರ್ಸ್

2016: ಬಳ್ಳಾರಿ ಟಸ್ಕರ್ಸ್, ರನ್ನರ್ಸ್ ಅಪ್: ಹುಬ್ಬಳ್ಳಿ ಟೈಗರ್ಸ್

2017: ಬೆಳಗಾವಿ ಪ್ಯಾಂಥರ್ಸ್, ರನ್ನರ್ಸ್ ಅಪ್: ಬಿಜಾಪುರ ಬುಲ್ಸ್

2018: ಬಿಜಾಪುರ ಬುಲ್ಸ್, ರನ್ನರ್ಸ್ ಅಪ್: ಬೆಂಗಳೂರು ಬ್ಲಾಸ್ಟರ್ಸ್

LEAVE A REPLY

Please enter your comment!
Please enter your name here

four × 1 =