ಕೆಪಿಎಲ್ ಫಿಕ್ಸಿಂಗ್: ಕಿಂಗ್ ಪಿನ್ ಭವೇಶ್ ಅರೆಸ್ಟ್ , ಆಟಗಾರರಿಗೂ ಇದ್ಯಾ ಲಿಂಕ್..?

0

ಬೆಂಗಳೂರು, ಅಕ್ಟೋಬರ್ 2: ಕರ್ನಾಟಕ ಪ್ರೀಮಿಯರ್ ಲೀಗ್(ಕೆಪಿಎಲ್) ಟಿ20 ಟೂರ್ನಿಯಲ್ಲಿ ನಡೆದಿದೆ ಎನ್ನಲಾಗುತ್ತಿರುವ ಮ್ಯಾಚ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಪ್ರಕರಣದಲ್ಲಿ ಬೆಂಗಳೂರಿನ ಸಿಸಿಬಿ ಪೊಲೀಸರು ದೊಡ್ಡ ಬೇಟೆಯಾಡಿದ್ದಾರೆ.

ಪ್ರಕರಣದ ಪ್ರಮುಖ ರೂವಾರಿ, ಐಪಿಎಲ್, ಕೆಪಿಎಲ್ ಪಂದ್ಯಗಳ ವೇಳೆ ಮೈದಾನದಲ್ಲಿ ಡ್ರಮ್ ಬಾರಿಸುವ ಸೆಲೆಬ್ರಿಟಿ ಡ್ರಮ್ಮರ್ ಭವೇಶ್ ಬಾಫ್ನಾ ಎಂಬಾತನನ್ನು ಬಂಧಿಸಲಾಗಿದೆ. ಮೂಲತಃ ದೆಹಲಿಯನವಾದ ಭವೇಶ್ನನ್ನು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತೀವ್ರ ವಿಚಾರಣೆಗೆ ಒಳಪಡಿಸುತ್ತಿದ್ದಾರೆ.

ಭವೇಶ್ ಬಾಫ್ನಾ, ಕೆಪಿಎಲ್ ಪಂದ್ಯಗಳಲ್ಲಿ ಈತ KPL ಪಂದ್ಯದಲ್ಲಿ ಆಟಗಾರರನ್ನ ಬುಕ್ ಮಾಡುತ್ತಿದ್ದ ಎನ್ನಲಾಗ್ತಿದೆ. ಬಳ್ಳಾರಿ ಟಸ್ಕರ್ಸ್ ಆಟಗಾರ ಭವೇಶ್ ಗುಲೇಚಾ ನೀಡಿರುವ ದೂರಿನ ಆಧಾರದಲ್ಲಿ ಭವೇಶ್ ಬಾಫ್ನಾ ಬಂಧನವಾಗಿದ್ದು, ಮತ್ತೊಬ್ಬ ಕಿಂಗ್ ಪಿನ್ ಸಾನ್ಯಾಮ್ ಬಂಧನಕ್ಕಾಗಿ ಸಿಸಿಬಿ ಪೊಲೀಸರು ಬಲೆ ಬೀಸಿದ್ದಾರೆ.

PC: Facebook

ಕೆಪಿಎಲ್ ಪಂದ್ಯಗಳ ಸಂದರ್ಭದಲ್ಲಿ ಆಟಗಾರರಿಗೆ ಅವರು ಆಮಿಷ ಒಡ್ಡಿ ಬಲೆಗೆ ಬೀಳಿಸುತ್ತಿದ್ದರು. ಸ್ಪಾಟ್ ಫಿಕ್ಸಿಂಗ್ಗಾಗಿ ಬಳ್ಳಾರಿ ಟಸ್ಕರ್ಸ್ ಆಟಗಾರ ಭವೇಶ್ ಗುಲೇಚಾ ಅವರನ್ನು ಸಂಪರ್ಕಿಸಿದ್ದ ಈ ಬುಕ್ಕಿಗಳು ಒಂದು ಓವರ್ಗೆ 10ಕ್ಕೂ ಹೆಚ್ಚು ರನ್ ನೀಡಿದೆ ಎರಡೂವರೆ ನೀಡುವುದಾಗಿ ಆಮಿಷ ಒಡ್ಡುತ್ತಿದ್ದರು. ಕೆಪಿಎಲ್ ಟೂರ್ನಿಯ ವೇಳೆ ಭವೇಶ್ ಗುಲೇಚಾ ಅವರನ್ನು ಜೆಪಿ ನಗರದ ಖಾಸಗಿ ಕೆಫೆಯೊಂದರಲ್ಲಿ ಭೇಟಿ ಮಾಡಿದ್ದ ಆರೋಪಿಗಳು, ಸ್ಪಾಟ್ ಫಿಕ್ಸಿಂಗ್ ನಡೆಸುವಂತೆ ಆಮಿಷ ಒಡ್ಡಿದ್ದರು. ಆ ಸಂದರ್ಭದಲ್ಲಿ ಬುಕ್ಕಿಗಳ ಆಫರ್ ಅನ್ನು ಭವೇಶ್ ಗುಲೇಚಾ ನಿರಾಕರಿಸಿದ್ದರು. ಜೆಪಿ ನಗರದ ಕೆಫೆಯಲ್ಲಿ ಡೀಲ್ ವಿಫಲವಾದಾಗ 2ನೇ ಬಾರಿ ಏರ್ ಪೋರ್ಟ್ ರಸ್ತೆಯಲ್ಲಿರುವ ತಾಜ್ ಹೋಟೆಲ್ನಲ್ಲಿ ಡೀಲ್ ಕುದುರಿಸಲು ಮುಂದಾಗಿದ್ದರು. ಈ ವೇಳೆ ಭವೇಶ್ ಗುಲೇಚಾ ಅವರಿಗೆ ಬುಕ್ಕಿ ಭವೇಶ್ ಬಾಫ್ನಾ ಮತ್ತೊಬ್ಬ ಬುಕ್ಕಿ ಸಾನ್ಯಾಮ್ನನ್ನು ಭೇಟಿ ಮಾಡಿಸಿದ್ದ. ಈ ಸಂದರ್ಭದಲ್ಲೂ ಭವೇಶ್ ಗುಲೇಚಾ ಸ್ಪಾಟ್ ಫಿಕ್ಸಿಂಗ್ಗೆ ಡೀಲ್ ಒಪ್ಪಿಕೊಳ್ಳಲು ನಿರಾಕರಿಸಿದ್ದರು. ಈ ಬಗ್ಗೆ ಭವೇಶ್ ಗುಲೇಚಾ ಎರಡು ದಿನಗಳ ಹಿಂದೆ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

 

ಹೀಗೆ ನಡೆಯುತ್ತಿತ್ತು ಸ್ಪಾಟ್ ಫಿಕ್ಸಿಂಗ್..!

ಕೆಪಿಎಲ್ ಪಂದ್ಯಗಳಿಗೂ ಮೊದಲು ಆಟಗಾರರನ್ನು ಬುಕ್ ಮಾಡುತ್ತಿದ್ದ ಭವೇಶ್ ಬಾಫ್ನಾ, ನಂತರ ಡ್ರಮ್ ಬಾರಿಸುವ ನೆಪದಲ್ಲಿ ಆ ಪಂದ್ಯಗಳಿಗೆ ಹಾಜರಾಗುತ್ತಿದ್ದ. ನಂತರ ಮೈದಾನದಲ್ಲೇ ಬೌಲರ್ಗಳಿಗೆ ನಿರ್ದಿಷ್ಟ ಓವರ್ನಲ್ಲಿ ಎಷ್ಟು ರನ್ ಕೊಡಬೇಕೆಂದು ಡ್ರಮ್ ಬಾರಿಸುವ ಮೂಲಕವೇ ಸಿಗ್ನಲ್ ಕೊಡುತ್ತಿದ್ದ. ಭವೇಶ್ ಬಾಫ್ನಾಗೆ ಆನ್ ಲೈನ್ ಮೂಲಕ ಬುಕ್ಕಿಗಳಿಂದ ಮಾಹಿತಿ ಬರುತ್ತಿತ್ತು. ಆ ಮಾಹಿತಿಯನ್ನು ಡ್ರಮ್ ಕೋಡ್ ವರ್ಡ್ ಮೂಲಕ ಭವೇಶ್ ಭಾಪ್ನಾ ಬುಕ್ ಆಗಿದ್ದ ಆಟಗಾರರಿಗೆ ರವಾನಿಸುತ್ತಿದ್ದ. ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಂದ್ಯಗಳ ವೇಳೆಯೂ ಈತ ಮೈದಾನದಲ್ಲಿ ಡ್ರಮ್ ಬಾರಿಸುತ್ತಿದ್ದ ಎಂಬ ಅಂಶ ಬೆಳಕಿಗೆ ಬಂದಿದೆ.

LEAVE A REPLY

Please enter your comment!
Please enter your name here

two × three =