ಪುಲ್ವಾಮ ಅಟ್ಯಾಕ್: ಚಿನ್ನಸ್ವಾಮಿ ಮೈದಾನದಲ್ಲಿದ್ದ ಪಾಕ್ ಕ್ರಿಕೆಟಿಗರ ಫೋಟೋ ಕಿತ್ತೆಸೆದ ಕೆಎಸ್‌ಸಿಎ

0

ಬೆಂಗಳೂರು, ಫೆಬ್ರವರಿ 18: ಪುಲ್ವಾಮ ಉಗ್ರ ದಾಳಿಗೆ ಭಾರತದ 44 CRPF ಯೋಧರು ಬಲಿಯಾದ ಬೆನ್ನಲ್ಲೇ ಪಾಕಿಸ್ತಾು ವಿರುದ್ಧ ಭಾರತೀಯರ ಆಕ್ರೋಶ ಭುಗಿಲೆದ್ದಿದೆ.

ಘಟನೆಯನ್ನು ಖಂಡಿಸಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿದ್ದ ಪಾಕಿಸ್ತಾನಿ ಕ್ರಿಕೆಟಿಗರ ಫೋಟೋಗಳನ್ನು ತೆರವುಗೊಳಿಸಿದೆ. ಚಿನ್ನಸ್ವಾಮಿ ಕ್ರೀಡಾಂಗಣದ ಆವರಣದಲ್ಲಿ ಪಾಕಿಸ್ತಾನ ತಂಡದ ಮಾಜಿ ನಾಯಕರಾದ ಹಾಲಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ವಸೀಮ್ ಅಕ್ರಂ ಅವರ ಫೋಟೋಗಳ ಜೊತೆ ಪಾಕಿಸ್ತಾನ ತಂಡದ ಫೋಟೋವನ್ನೂ ಕೂಡ ಹಾಕಲಾಗಿತ್ತು. ಈ ಎಲ್ಲಾ ಫೋಟೋಗಳನ್ನು ರಾಜ್ಯ ಕ್ರಿಕೆಟ್ ಸಂಸ್ಥೆ ಎರಡು ದಿನಗಳ ಹಿಂದೆಯೇ ತೆರವುಗೊಳಿಸಿ ಉಗ್ರ ದಾಳಿಯ ವಿರುದ್ಧ ತನ್ನ ಆಕ್ರೋಶ ವ್ಯಕ್ತಪಡಿಸಿದೆ.

ಈ ಬಗ್ಗೆ ಮಾತನಾಡಿರುವ ರಾದ್ಯ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಆರ್.ಸುಧಾಕರ್ ರಾವ್ ‘’ನಮ್ಮ ದೇಶದ ಘನತೆಯನ್ನು ಎತ್ತಿ ಹಿಡಿಯುವ ಕೆಲಸದಲ್ಲಿ ನಾವು ಯಾವಾಗಲೂ ಮುಂದಿರುತ್ತೇವೆ. ಉಗ್ರರಿಗೆ ಕುಮ್ಮಕ್ಕು ನೀಡುತ್ತಿರುವ ರಾಷ್ಟ್ರದ ಕ್ರಿಕೆಟ್ ಆಟಗಾರರ ಚಿತ್ರಗಳನ್ನು ನಮ್ಮಲ್ಲಿ ಹಾಕುವುದು ಒಳ್ಳೆಯದಲ್ಲ’’ ಎಂದಿದ್ದಾರೆ.

ಪಂಜಾಬ್ ಕ್ರಿಕೆಟ್ ಸಂಸ್ಥೆ, ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾ ಕೂಡ ಪಾಕ್ ಕ್ರಿಕೆಟಿಗರ ಚಿತ್ರಗಳನ್ನು ತೆರವುಗೊಳಿಸಿವೆ.

LEAVE A REPLY

Please enter your comment!
Please enter your name here

one × three =