ಕೆಎಸ್‌ಸಿಎ ಕ್ರಿಕೆಟ್: ಯತೀಶ್ ಆಲ್ರೌಂಡ್ ಆಟ, ಇಂಡಿಯಾ ಬುಲ್ಸ್‌ ಜಯದ ಓಟ

0

ಬೆಂಗಳೂರು, ಮಾರ್ಚ್ 4: ಕೆಎಸ್‌ಸಿಎ ಗ್ರೂಪ್ II, ಡಿವಿಜನ್ II ಪಂದ್ಯದಲ್ಲಿ ಇಂಡಿಯಾ ಬುಲ್ಸ್ ಹೌಸಿಂಗ್ ಫೈನಾನ್ಸ್ ಲಿ. ತಂಡ, ಸೌತ್ ವೆಸ್ಟರ್ನ್ ರೈಲ್ವೇಸ್ ನ ಬೆಂಗಳೂರು ಡಿವಿಜನ್ ಸ್ಪೋರ್ಟ್ಸ್ ಅಸೋಸಿಯೇಷನ್ ತಂಡವನ್ನು ಸೋಲಿಸಿ ಟೂರ್ನಿಯಲ್ಲಿ ಗೆಲುವಿನ ಓಟ ಮುಂದುವರಿಸಿದೆ.

ಭಾನುವಾರ ನಡೆದ ಪಂದ್ಯದಲ್ಲಿ ಇಂಡಿಯಾ ಬುಲ್ಸ್ ತಂಡ ಬೆಂಗಳೂರು ಡಿವಿಜನ್ ಸ್ಪೋರ್ಟ್ಸ್ ಅಸೋಸಿಯೇಷನ್ ತಂಡವನ್ನು 16 ರನ್ ಗಳಿಂದ ಸೋಲಿಸಿತು. ಮೊದಲು ಬ್ಯಾಟ್ ಮಾಡಿದ ಇಂಡಿಯಾ ಬುಲ್ಸ್ ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 267 ರನ್ ಗಳ ಸವಾಲಿನ ಮೊತ್ತ ಕಲೆ ಹಾಕಿತು. ತಂಡದ ಪರ ಆಲ್ರೌಂಡರ್ ಯತೀಶ್ ಕುಮಾರ್ ಅಜೇಯ 63 ರನ್ ಗಳಿಸಿದರೆ, ವಿಜೇತ್ 76 ರನ್ ಗಳಿಸಿದರು.

ನಂತರ ಗುರಿ ಬೆನ್ನಟ್ಟಿದ ಬೆಂಗಳೂರು ಡಿವಿಜನ್ ಸ್ಪೋರ್ಟ್ಸ್ ಅಸೋಸಿಯೇಷನ್ ತಂಡ 50 ಓವರ್ ಗಳಲ್ಲಿ 9 ವಿಕೆಟ್ ಗೆ 251 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಬೌಲಿಂಗ್ ನಲ್ಲೂ ಮಿಂಚಿದ ಯತೀಶ್ ಕುಮಾರ್ 51 ರನ್ನಿತ್ತು 2 ವಿಕೆಟ್ ಪಡೆದರೆ, ಪ್ರಮೀತ್(2/39) ಮತ್ತು ಸುಧೀರ್ ಭಟ್(2/51) ಕೂಡ ತಲಾ 2 ವಿಕೆಟ್ಸ್ ಉರುಳಿಸಿದರು.

Brief scores

India Bulls Housing Pvt. Ltd: 267 for 7 in 50 overs [Surendhra 20, Fahad VK 38, Vijeth 76, Yatheesh Kumar 63*, Shareef 2/38, Vijay Kumar 2/39] beat Bangalore Divison Sports Association, South Western Railway: 251 for 9 in 50 overs [Bharath33, Vijay Kumar 53, Shareef 26, Robin 53, Gurunag 21, Yatheesh Kumar 2/51, Pramith 2/39,Sudheer Bhat 2/51] by 16 runs.

Corporation Bank: 191 for 9 in 37.2 overs [Murugesh 25, Vinu Prasad 65, Pramod Kamath 20, Sahas Rai 2/37, Ancil Pinto 2/30, Harish 3/33] beat DELL Cricket Club: 153 all out in 31.1 overs [Prateek 36, Harish 75, Manjunath 2/24, Sharan 3/31, Vinu Prasad 3/14] by 38 runs.

ITC Sports Club: 194 all out in 39.2 overs [Thushar 118, Amogh S 2/55, Shiva Kumar 5/18] lost to Prime Focus Technologies: 195 for 3 in 21.1 overs [Sushil V 66*, Shiva Kumar 56, Rohith 29, Srinivas N 2/34] by 7 wickets.

LEAVE A REPLY

Please enter your comment!
Please enter your name here

5 × 5 =