ಮುಷ್ತಾಕ್ ಅಲಿ ಟಿ20: ಸೂಪರ್ ಲೀಗ್‌ಗೆ ಕರ್ನಾಟಕ ತಂಡ ಪ್ರಕಟ, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

0


ಬೆಂಗಳೂರು, ಮಾರ್ಚ್ 4: ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ಸೂಪರ್ ಲೀಗ್ ಪಂದ್ಯಗಳಿಗೆ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದ್ದು, ಲೀಗ್ ಹಂತದಲ್ಲಿ ಆಡಿದ ತಂಡವನ್ನೇ ಉಳಿಸಿಕೊಳ್ಳಲಾಗಿದೆ.

ಸೂಪರ್ ಲೀಗ್ ಹಂತದಲ್ಲಿ ಕರ್ನಾಟಕ ತಂಡ ‘ಬಿ’ ಗುಂಪಿನಲ್ಲಿ ಮುಂಬೈ, ಉತ್ತರ ಪ್ರದೇಶ, ದೆಹಲಿ ಮತ್ತು ವಿದರ್ಭ ತಂಡಗಳೊಂದಿಗೆ ಸ್ಥಾನ ಪಡೆದಿದೆ. ರೈಲ್ವೇಸ್, ಬಂಗಾಳ, ಮಹಾರಾಷ್ಟ್ರ ಮತ್ತು ಜಾರ್ಖಂಡ್ ತಂಡಗಳು ‘ಎ’ ಗುಂಪಿನಲ್ಲಿವೆ. ಸೂಪರ್ ಲೀಗ್ ಹಂತದ ಎಲ್ಲಾ ಪಂದ್ಯಗಳು ಇಂದೋರ್ ನಲ್ಲಿ ನಡೆಯಲಿವೆ.

ಕಟಕ್ ನಲ್ಲಿ ನಡೆದ ಲೀಗ್ ಹಂತದ ಪಂದ್ಯಗಳಲ್ಲಿ ಕರ್ನಾಟಕ ಅಜೇಯ ಸಾಧನೆ ಮಾಡಿತ್ತು. ‘ಡಿ’ ಗುಂಪಿನಲ್ಲಿದ್ದ ಕರ್ನಾಟಕ ತಂಡ ಬಂಗಾಳ, ಛತ್ತೀಸ್ ಗಢ, ಅಸ್ಸಾಂ, ಹರ್ಯಾಣ, ಒಡಿಶಾ, ಅರುಣಾಚಲ ಪ್ರದೇಶ ಮತ್ತು ಮಿಜೋರಾಂ ವಿರುದ್ಧ ಗೆದ್ದು ಅಜೇಯವಾಗಿ ಸೂಪರ್ ಲೀಗ್ ಹಂತಕ್ಕೇರಿತ್ತು.

ಸೂಪರ್ ಲೀಗ್ ಪಂದ್ಯಗಳಿಗೆ ಕರ್ನಾಟಕ ತಂಡ: ಮನೀಶ್ ಪಾಂಡೆ(ನಾಯಕ), ಕರುಣ್ ನಾಯರ್(ಉಪನಾಯಕ), ಮಯಾಂಕ್ ಅಗರ್ವಾಲ್, ರೋಹನ್ ಕದಂ, ಶರತ್ ಬಿ.ಆರ್(ವಿಕೆಟ್ ಕೀಪರ್), ಶ್ರೇಯಸ್ ಗೋಪಾಲ್, ಜೆ.ಸುಚಿತ್, ಆರ್.ವಿನಯ್ ಕುಮಾರ್, ಎಂ.ಪ್ರಸಿದ್ಧ್ ಕೃಷ್ಣ, ಅಭಿಮನ್ಯು ಮಿಥುನ್, ಕೆ.ಸಿ ಕಾರಿಯಪ್ಪ, ವಿ.ಕೌಶಿಕ್, ಮನೋಜ್ ಭಾಂಡಗೆ, ಲವನೀತ್ ಸಿಸೋಡಿಯಾ(ವಿಕೆಟ್ ಕೀಪರ್), ಕೋಚ್: ಯರೇಗೌಡ, ಬೌಲಿಂಗ್ ಕೋಚ್: ಎಸ್.ಅರವಿಂದ್, ಮ್ಯಾನೇಜರ್: ಅನುತೋಷ್ ಪಾಲ್, ಲಾಜಿಸ್ಟಿಕ್ ಮ್ಯಾನೇಜರ್: ಎ.ರಮೇಶ್ ರಾವ್.

ಸೂಪರ್ ಲೀಗ್: ಕರ್ನಾಟಕ ತಂಡದ ವೇಳಾಪಟ್ಟಿ

ಮಾರ್ಚ್ 8: ಕರ್ನಾಟಕ Vs ಮುಂಬೈ

ಮಾರ್ಚ್ 9: ಕರ್ನಾಟಕ Vs ಉತ್ತರ ಪ್ರದೇಶ

ಮಾರ್ಚ್ 10: ಕರ್ನಾಟಕ Vs ದೆಹಲಿ

ಮಾರ್ಚ್ 12: ಕರ್ನಾಟಕ Vs ವಿದರ್ಭ

LEAVE A REPLY

Please enter your comment!
Please enter your name here

15 − 3 =